ಮಡಂತ್ಯಾರಿನಲ್ಲಿ ಆಧಾರ್ ಶಿಬಿರ

0

ಮಡಂತ್ಯಾರು: ಗ್ರಾಮ‌ ಪಂಚಾಯತ್ ಹಾಗೂ ಜೆಸಿಐ ಸಹಯೋಗದಲ್ಲಿ, ಭಾರತೀಯ ಅಂಚೆ ಇಲಾಖೆ, ಪುತ್ತೂರು ವಿಭಾಗದ ಸಹಕಾರದಲ್ಲಿ ಜ. 12 ಹಾಗೂ 13ರಂದು ನಡೆಯಲಿರುವ ಎರಡು ದಿನಗಳ ಆಧಾರ್ ಶಿಬಿರವನ್ನು ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜೇಸಿ ರೂಪಾ ನವೀನ್ ದೀಪ ಬೆಳಗಿಸಿ, ಉದ್ಘಾಟಿಸಿದರು.

ಅತಿಥಿಗಳಾಗಿ ಜೆಸಿಐ ಅಧ್ಯಕ್ಷ ಜೇಸಿ ಸಾಯಿಸುಮಾ ಎಂ. ನಾವಡ, ಜೆಸಿಐ ಭಾರತ ವಲಯ 15 ರ ಸಂಯೋಜಕ ಜೇಸಿ ಅಮಿತಾ ಅಶೋಕ್, ಅಂಚೆ ಇಲಾಖೆಯ ಮೇಲ್ವಿಚಾರಕಿ ವಿಮಲಾ ಪಿ., ಗ್ರಾಮ ಪಂಚಾಯತ್ ಮಡಂತ್ಯಾರಿನ ಉಪಾಧ್ಯಕ್ಷ ಗೋಪಾಲಕೃಷ್ಣ ಕೆ., ಸದಸ್ಯರಾದ ವಿಶ್ವನಾಥ ಪೂಜಾರಿ ಹಾರಬೆ, ಕಿಶೋರ್ ಶೆಟ್ಟಿ ಮೂಡಾಯೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೆಸಿಐ ಮಡಂತ್ಯಾರಿನ ಕಾರ್ಯದರ್ಶಿ ಜೇಸಿ ಯತೀಶ್ ರೈ, ಯುವ ಜೇಸಿ ಅಧ್ಯಕ್ಷ ಜೇಸಿ ಕೃಪಾಲ್, ಲೇಡಿ ಜೇಸಿ ಸಂಯೋಜಕಿ, ಜೇಸಿ ಭವ್ಯ ಟಿ.ಪೈ, ಜೇಸಿ ಅಶ್ವಿನಿ ಮತ್ತು ಪಂಚಾಯತ್ ಹಾಗೂ ಅಂಚೆ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಸಹಕರಿಸಿದ್ದರು.

ಜೆಸಿಐ ಮಡಂತ್ಯಾರಿನ ಪೂರ್ವಾಧ್ಯಕ್ಷ ಜೇಸಿ ಅಶೋಕ್ ಗುಂಡಿಯಲ್ಕೆ ಸ್ವಾಗತಿಸಿ, ಗ್ರಾಮ ಪಂಚಾಯತ್ ಮಡಂತ್ಯಾರಿನ ಉಪಾಧ್ಯಕ್ಷ ಗೋಪಾಲಕೃಷ್ಣ ಕೆ. ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಗ್ರಾಮ ಪಂಚಾಯತ್ ಮಡಂತ್ಯಾರಿನ ಸದಸ್ಯ ವಿಶ್ವನಾಥ ಪೂಜಾರಿ ಹಾರಬೆಯವರು ಧನ್ಯವಾದ ಸಮರ್ಪಣೆ ಮಾಡಿದರು.

LEAVE A REPLY

Please enter your comment!
Please enter your name here