ಅನುಗ್ರಹ ಟ್ರೈನಿಂಗ್ ಕಾಲೇಜಿನಲ್ಲಿ T.O.T ತರಬೇತಿ

0

ಬೆಳ್ತಂಗಡಿ: ಅನುಗ್ರಹ ಎಜುಕೇಶನ್ ಸೋಷಲ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಶಿಕ್ಷಕರು ಮತ್ತು ಸಿಬ್ಬಂದಿಗಳ ವೃತ್ತಿ ಕೌಶಲ್ಯ ವೃದ್ಧಿಗಾಗಿ ಆಯೋಜಿಸಲಾದ Training Of Trainers (T.O.T) ವಿಶೇಷ ತರಬೇತಿ ಕಾರ್ಯಕ್ರಮವು ಬೆಳ್ತಂಗಡಿ ಅನುಗ್ರಹ ಟ್ರೈನಿಂಗ್ ಕಾಲೇಜಿನಲ್ಲಿ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮದ ಕೇಂದ್ರ ಆಕರ್ಷಣೆಯಾಗಿ SDM ರೆಸಿಡೆನ್ಷಿಯಲ್ ಪಿಯು ಕಾಲೇಜು, ಉಜಿರೆ ನಿವೃತ್ತ ಪ್ರಿನ್ಸಿಪಲ್ ಮತ್ತು ನ್ಯಾಷನಲ್ ಸಾಫ್ಟ್ ಸ್ಕಿಲ್ ಟ್ರೈನರ್ ಡಾ. ಟಿ. ಕೃಷ್ಣಮೂರ್ತಿ ಅವರು ಶಿಕ್ಷಕರಿಗೆ ಸಮಗ್ರ ಹಾಗೂ ಪ್ರೇರಣಾದಾಯಕ ತರಬೇತಿಯನ್ನು ನೀಡಿದರು. ಶಿಕ್ಷಣ ಕ್ಷೇತ್ರದ ದೀರ್ಘ ಅನುಭವ ಹೊಂದಿರುವ ಡಾ. ಟಿ. ಕೃಷ್ಣಮೂರ್ತಿ ಅವರು ಪರಿಣಾಮಕಾರಿ ಬೋಧನಾ ವಿಧಾನಗಳು, ಸೃಜನಾತ್ಮಕ ಕಲಿಕಾ ಕ್ರಮ, ತರಗತಿ ನಿರ್ವಹಣೆ, ವಿದ್ಯಾರ್ಥಿ–ಮನೋವಿಜ್ಞಾನ, ನಾಯಕತ್ವ ಮತ್ತು ಸಂವಹನ ಕೌಶಲ್ಯ ವಿಷಯಗಳಲ್ಲಿ ಆಳವಾದ practically-oriented ತರಬೇತಿ ನೀಡಿದರು. ಅವರ ಉದಾಹರಣೆಗಳು ಮತ್ತು ಜೀವಂತ ಅನುಭವಗಳು ಶಿಕ್ಷಕರಲ್ಲಿ ಹೊಸ ಚೈತನ್ಯ ಮೂಡಿಸಿದವು.

ಅನುಗ್ರಹ ಟ್ರೈನಿಂಗ್ ಕಾಲೇಜಿನ ಬೆಳ್ತಂಗಡಿ ಮತ್ತು ಮುಡಿಪು ಸಂಸ್ಥೆಯ ಸಿಬ್ಬಂದಿಗಳು ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಫೈರ್ ಅಂಡ್ ಸೇಫ್ಟಿ ವಿಭಾಗದ ಶ್ರೀಮತಿ ಅಂಕಿತ, ಫ್ಯಾಷನ್ ಡಿಸೈನ್ ವಿಭಾಗದ ಅಕ್ಷತಾ, ಶಿಕ್ಷಕಿಯರಾದ ತಸ್ರೀಫಾ ಮತ್ತು ತನ್ಸಿಯಾ, ಬೆಳ್ತಂಗಡಿ ಘಟಕದ ಶ್ರೇಯಾಂಕ, AC ಮತ್ತು ರೆಫ್ರಿಜರೇಟರ್ ಮೆಕ್ಯಾನಿಕ್ ವಿಭಾಗದ ಉಮೇಶ್ ಮತ್ತು ಮೆಲ್ವಿನ್ ಸುದರ್ಶನ್ ಅವರು ತರಬೇತಿಯನ್ನು ಪೂರ್ಣಗೊಳಿಸಿದರು. ತರಬೇತಿ ನಂತರ Training of Trainers (TOT) ಎಂಬ ಪ್ರಮಾಣ ಪತ್ರವನ್ನು ಸಂಸ್ಥೆ ವತಿಯಿಂದ ವಿತರಿಸಲಾಯಿತು.

ಕಾರ್ಯಕ್ರಮ ಯಶಸ್ವಿಯಾಗಲು ಉನೈಸಾ ಮತ್ತು ಅಪ್ನಾಜ್ ಅವರ ಸಹಕಾರ ದೊರೆಯಿತು. ಸಂಸ್ಥೆ ತರಬೇತಿಯಲ್ಲಿ ಪಾಲ್ಗೊಂಡ ಎಲ್ಲಾ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.

LEAVE A REPLY

Please enter your comment!
Please enter your name here