ಕಾಶಿಪಟ್ಣ: ಗರೋಡಿ ಫ್ರೆಂಡ್ಸ್ ವತಿಯಿಂದ “ಸ್ಪಚ್ಚ ಸಂಡೇ” ಸ್ಪಚ್ಛತಾ ಅಭಿಯಾನ

0

ಕಾಶಿಪಟ್ಣ: ಗರೋಡಿ ಫ್ರೆಂಡ್ಸ್ ವತಿಯಿಂದ “ಸ್ಪಚ್ಚ ಸಂಡೇ”ಎನ್ನುವ ಸ್ಪಚ್ಛತಾ ಅಭಿಯಾನ ನಡೆಯಿತು. ಹಿರಿಯರಾದ ಅಮ್ಮು ಸಾಲ್ಯಾನ್ ಹಿಬಾರಿ ಸ್ಪಚ್ಛತಾ ಕೆಲಸಕ್ಕೆ ಚಾಲನೆ ಕೊಟ್ಟರು. ಪಂಚಾಯತ್ ಅಧ್ಯಕ್ಷ ಸತೀಶ್ ಕೆ. ಅವರು ಶುಭ ಹಾರೈಸಿ, ಸಹಕರಿಸಿದರು.

ಸ್ಪಚ್ಛತಾ ಅಭಿಯಾನದಲ್ಲಿ ಗರೋಡಿ ಫ್ರೆಂಡ್ಸ್ ನ ಅಧ್ಯಕ್ಷ ಮನೋಜ್ ಕೆ. ಕಾಶಿಪಟ್ಣ, ಗೌರವಾಧ್ಯಕ್ಷ ಜಿತೇಶ್ ಸಾಲ್ಯಾನ್, ಉಪಾಧ್ಯಕ್ಷ ಪ್ರದೀಪ್ ಕುಂಜಾಡಿ, ಕಾರ್ಯದರ್ಶಿ ಶ್ರವಣ್ ಅಮೀನ್, ಜೊತೆ ಕಾರ್ಯದರ್ಶಿ ರಾಕೇಶ್, ಕೋಶಾಧಿಕಾರಿ ರಾಜೇಂದ್ರ ಮರಮ್ಮ ದೊಟ್ಟು ಹಾಗೂ ಫ್ರೆಂಡ್ಸ್ ಕ್ಲಬ್ ನ ಎಲ್ಲಾ ಸದಸ್ಯರು ಪಾಲ್ಗೊಂಡರು. ಗ್ರಾಮದ ಪ್ರಮುಖ ಹೆದ್ದಾರಿ ಬದಿಯ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸ್ಪಚ್ಚಗೊಳಿಸಿ ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ಸ್ಪಚ್ಛತೆಯ ಮಹತ್ವವನ್ನು ತಿಳಿಸಲಾಯಿತು. ಈ ಕಾರ್ಯಕ್ರಮಕ್ಕೆ ಎಸ್.ಕೆ.ಎಸ್.ಎಸ್.ಎಸ್.ಎಫ್. ಅಧ್ಯಕ್ಷ ಹಾಗೂ ಎಸ್,ಡಿ.ಎಮ್.ಸಿ ಸದಸ್ಯ ಹಮೀದ್ ಕಾಶಿಪಟ್ಣ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಪ್ರವೀಣ್ ಪಿಂಟೋ ಸಹಕರಿಸಿದರು.

LEAVE A REPLY

Please enter your comment!
Please enter your name here