ಮಡಂತ್ಯಾರು: ಹಿಂದೂ ಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ

0

ಮಡಂತ್ಯಾರು: ಹಿಂದೂ ಸಮಾಜದಲ್ಲಿ ಏಕತೆ, ಸಾಮರಸ್ಯ ಮತ್ತು ಸಂಘಟಿತ ಚಟುವಟಿಕೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಹಿಂದೂ ಸಂಗಮ ಮಡಂತ್ಯಾರು ನಿರ್ವಹಣಾ ತಂಡದಿಂದ ಮಡಂತ್ಯಾರು ಮಂಡಲ ನಿರ್ವಹಣಾ ತಂಡದ ಪದಾಧಿಕಾರಿಗಳಿಗಾಗಿ ಪ್ರಶಿಕ್ಷಣ ವರ್ಗ ಹಾಗೂ ಹಿಂದೂ ಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಜ.10ರಂದು ಸಂಜೆ ಶ್ರೀ ಮಹಿಷ ಮರ್ಧಿಣಿ ದೇವಸ್ಥಾನ, ಪಾರೆಂಕಿಯಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಹಿಂದೂ ಸಂಗಮದ ಆಶಯ, ಪದಾಧಿಕಾರಿಗಳ ಜವಾಬ್ದಾರಿಗಳು ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಸ್ಪಷ್ಟ ಮಾರ್ಗದರ್ಶನ ನೀಡಲಾಯಿತು. ಹಿಂದೂ ಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಬಾರ್ಯ ಶ್ರೀ ಮಹಿಷ ಮರ್ಧಿಣಿ ದೇವಸ್ಥಾನದ ಅರ್ಚಕ ಶ್ರೀಧರ್ ರಾವ್ ಪೇಜಾವರ ಅವರು ಅಧಿಕೃತವಾಗಿ ಬಿಡುಗಡೆ ಮಾಡಿದರು.

ಪ್ರಶಿಕ್ಷಣ ವರ್ಗವನ್ನು ತಾಲೂಕು ಸಂಯೋಜಕರಾದ ಅನಿಲ್ ಕುಮಾರ್ ಯು., ಹಾಗೂ ತಾಲೂಕು ಕಾರ್ಯದರ್ಶಿ ವಸಂತ ಮರಕಡ, ಸಹ ಕೋಶಾಧಿಕಾರಿ, ಪ್ರಭಾಕರ ಉಪ್ಪಡ್ಕ ಮತ್ತು ರಾಜಾರಾಮ್ ಪುರಿಯ ಅವರು ನಡೆಸಿಕೊಟ್ಟರು.

ಸಭೆಯಲ್ಲಿ ತಾಲೂಕು ಆಯೋಜನಾ ಸಮಿತಿಯ ಉಪಾಧ್ಯಕ್ಷ ಜಯಂತ್ ಶೆಟ್ಟಿ, ಜೊತೆ ಕಾರ್ಯದರ್ಶಿ ವೀರೇಂದ್ರ ಕುಮಾರ್, ಮಡಂತ್ಯಾರು ಮಂಡಲ ನಿರ್ವಹಣಾ ತಂಡದ ಸಂಯೋಜಕ ಶ್ರೀಕಾಂತ್ ಶೆಟ್ಟಿ, ಊರಿನ ಗಣ್ಯರು ಹಾಗೂ ಪರಿವಾರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಚ್ಚಿನ, ಪಾರೆಂಕಿ, ಮಾಲಾಡಿ, ಸೊಂಣಂದೂರು, ಮತ್ತು ಕುಕ್ಕಳ ಗ್ರಾಮಗಳಿಂದ ಸುಮಾರು 92 ಮಂದಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here