ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಶಿಫಾರಸ್ಸಿನ ಮೇರೆಗೆ ಅನಾರೋಗ್ಯದಿಂದ ಬಳಲುತ್ತಿರುವ ತಾಲೂಕಿನ ಎರಡು ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣ ಮಂಜೂರು

0

ಬೆಳ್ತಂಗಡಿ: ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಉಜಿರೆ ಇವರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ತಾಲೂಕಿನ ನೆರಿಯಾ ಗ್ರಾಮದ ಬಟ್ಟಾಯಿಪಾದೆ ಮನೆಯ ಶ್ವೇತಾ ಅವರಿಗೆ ರೂ. ಒಂದು ಲಕ್ಷ ಹಾಗೂ ಬಳಂಜ ಗ್ರಾಮದ ದರಿಮಾರು ಮನೆಯ ಶಿವರಾಮ ಹೆಗ್ಡೆ ಅವರಿಗೆ ಇಪ್ಪತ್ತೆರಡು ಸಾವಿರದ ಐನೂರ ಇಪ್ಪತ್ತೊಂದು ರೂ. ಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಜೂರು ಮಾಡಿದ್ದಾರೆ. ಮೊತ್ತವನ್ನು ನೇರ ನಗದು ಯೋಜನೆಯಡಿ ವರ್ಗಾವಣೆ ಮಾಡಲಾಗುತ್ತದೆ.

LEAVE A REPLY

Please enter your comment!
Please enter your name here