






ಬೆಳ್ತಂಗಡಿ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಸಂಪರ್ಕಕ್ಕೆ ಅನುಕೂಲ ಕಲ್ಪಿಸುವಂತಹ ಸ್ಥಳಗಳಲ್ಲಿ ಕಾಲುಸಂಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಅದರಂತೆ, ಸರಕಾರದಿಂದ ಈ ಬಾರಿಗೆ ತಲಾ ರೂ.25.00 ಲಕ್ಷ ವೆಚ್ಚದಲ್ಲಿ ಒಟ್ಟು ನಾಲ್ಕು ಕಾಮಗಾರಿಗಳು ಅನುಮೋದನೆಗೊಂಡಿರುತ್ತದೆ.


ಅನುಮೋದನೆಗೊಂಡ ಕಾಮಗಾರಿಗಳ ವಿವರ:1. ಮಲವಂತಿಗೆ ಗ್ರಾಮದ ಕುಮೇರು ಪರಿಶಿಷ್ಟ ಪಂಗಡ ಕಾಲೊನಿ ರಸ್ತೆಯಲ್ಲಿ ಕಾಲುಸಂಕ.
2. ನೆರಿಯ ಗ್ರಾಮದ ಪುಲ್ಲಾಜೆ ಎಂಬಲ್ಲಿ ಕಾಲುಸಂಕ.
3. ಸವಣಾಲು ಗ್ರಾಮದ ಕೋಡಿಮುಗೇರು ಎಂಬಲ್ಲಿ ಕಾಲುಸಂಕ.
4. ಕುಕ್ಕೇಡಿ ಗ್ರಾಮದ ಕಾಜಾಲ ಎಂಬಲ್ಲಿ ಕಾಲುಸಂಕ.
ಈ ಎಲ್ಲಾ ಕಾಮಗಾರಿಗಳಿಗೆ ಮುಂದಿನ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆಗಳನ್ನು ನಡೆಸಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಕಲ್ಪಿಸಲಿದ್ದು ಈ ಕಾರ್ಯಕ್ಕೆ ರೂ.1.00ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ ಎಂದು ಶಾಸಕರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









