ಬಳಂಜ: ಬದಿನಡೆ ನಾಗಬ್ರಹ್ಮ ಕ್ಷೇತ್ರದ ವರ್ಷಾವಧಿ ಜಾತ್ರೋತ್ಸವ ಸಂಪನ್ನ

0

ಬಳಂಜ: ಬೆಳ್ತಂಗಡಿ ತಾಲೂಕಿನ ಹೆಸರಾಂತ ನಾಗ ಸಾನಿಧ್ಯಗಳ ಕ್ಷೇತ್ರಗಳಲ್ಲಿ ಒಂದಾದ ಬಳಂಜ ಬದಿನಡೆ ಶ್ರೀ ಶಾಸ್ತಾರ ನಾಗಬ್ರಹ್ಮಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ಫಲ್ಗುಣಿ ನದಿ ತಟದಲ್ಲಿರುವ ಈ ದೇವಸ್ಥಾನದಲ್ಲಿ ಆಶ್ಲೇಷ ಬಲಿ, ದೇವರ ಬಲಿ ಉತ್ಸವ, ದುರ್ಗಾ ನಮಸ್ಕಾರ ಪೂಜೆ, ಅಯ್ಯಪ್ಪ ದೇವರ ವಿಶೇಷ ಪೂಜೆ, ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಬಳಂಜ ಹಾಗೂ ಪಂಚಶ್ರೀ ಕುಣಿತ ಭಜನಾ ಮಂಡಳಿ ಮತ್ತು ಪಂಚಶ್ರೀ ಮಹಿಳಾ ಭಜನಾ ಮಂಡಳಿ ನಾಲ್ಕೂರು ಅವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಸ್ವಾತಿ ಮ್ಯೂಸಿಕಲ್ ಕಾರ್ಯಾಣ ಅವರ ಭಕ್ತಿ ಗಾನ ವೈಭವ ಮನ ಸೆಳೆಯಿತು. ವ್ಯಾಘ್ರ ಚಾಮುಂಡಿ ದೈವದ ನರ್ತನ ಸೇವೆ, ದೈವ ದೇವರ ಭೇಟಿ ನಡೆಯಿತು. ಊರ ಪರವೂರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಕ್ಷೇತ್ರದ ದರ್ಮದರ್ಶಿ ಜಯ ಸಾಲಿಯಾನ್ ಮತ್ತು ಮಂಜುಳಾ ದಂಪತಿಗಳು ಎಲ್ಲರನ್ನೂ ಸ್ವಾಗತಿಸಿ ಪ್ರಸಾದ ನೀಡಿದರು.

LEAVE A REPLY

Please enter your comment!
Please enter your name here