






ತಣ್ಣೀರುಪಂತ: ಗೌಡರ ಯಾನೆ ಒಕ್ಕಲಿಗರ ಗ್ರಾಮ ಸಮಿತಿಯ ವಾರ್ಷಿಕ ಸಮಾವೇಶ ಜ. 4ರಂದು ಸಂತೋಷ್ ದೇವಿಕಾ ಪರದೋಟ್ಯಾ ಅವರ ಮನೆಯಲ್ಲಿ ಗ್ರಾಮ ಸಮಿತಿಯ ಅಧ್ಯಕ್ಷ ಕುಶಾಲಪ್ಪ ಗೌಡ ಅಳಕ್ಕೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಊರ ಗೌಡರಾದ ಶೀನಪ್ಪ ಗೌಡ ಕರ್ಪಡಿ, ಯುವರಾಜ್ ಅನಾರ್, ಪ್ರಸನ್ನ ಧರ್ಬೇ, ಪೂರ್ಣಿಮಾ ಗಣೇಶ್ ಅಳಕ್ಕೆ, ಹಿರಿಯರಾದ ದುಗ್ಗಪ್ಪ ಗೌಡ ಪೋಸಂಡೋಡಿ, ತಿಮ್ಮಪ್ಪ ಗೌಡ ಅಂಡೇಳು ಹಾಗೂ ತಣ್ಣೀರುಪಂತ ಗ್ರಾಮ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಈ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಜಯರಾಮ ಹಾಗೂ ಗಣಿತ ಮೋಡಲ್ ನಲ್ಲಿ ರಾಷ್ಟ್ರಿಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಪಿನ್ಯ ಪಿ.ಸಿ ಅವರನ್ನು ಸನ್ಮಾನಿಸಲಾಯಿತು. ಮತ್ತು 2024/25 ನೇ ಸಾಲಿನಲ್ಲಿ ವಿಶೇಷ ಸಾಧನೆ ಮಾಡಿದ ಸ್ವಜಾತಿ ಬಂಧವರ ಮಕ್ಕಳನ್ನು ಸನ್ಮಾನಿಸಲಾಯಿತು.
ಸ್ವಜಾತಿ ಬಾಂಧವರಿಗೆ ವಿವಿಧ ಆಟೋಟ ಸ್ಪರ್ಧೆ ಏರ್ಪಡಿಸಲಾಯಿತು. ಹಾಗೆಯೇ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪ್ರಭಾಕರ ಪೋಸಂದೋಡಿ ಸ್ವಾಗತಿಸಿದರು. ಚೆನ್ನಪ್ಪ ಗೌಡ ನಾರ್ಯ ಕಾರ್ಯಕ್ರಮ ನಿರೂಪಣೆ ನಿರ್ವಹಿಸಿದರು. ವೆಂಕಟ್ರಮಣ ಗೌಡ ಮುಂಚೆರಿ ಧನ್ಯವಾದವಿತ್ತರು.









