ಆಯುಷ್ಮಾನ್ ಸ್ವಾಸ್ಥ್ಯ ಸೇವಾ ಟ್ರಸ್ಟ್ ಉದ್ಘಾಟನೆ-ಸೇವಾಧಾಮದ 10 ಮಂದಿ ಫಲಾನುಭವಿಗಳಿಗೆ ಸಾಧನ ಸಲಕರಣೆಗಳಿಗೆ ದೇಣಿಗೆ ಹಸ್ತಾಂತರ

0

ಬೆಳ್ತಂಗಡಿ: ಮಂಗಳೂರು ಆಯುಷ್ಮಾನ್ ಸ್ವಾಸ್ಥ್ಯ ಸೇವಾ ಟ್ರಸ್ಟ್ ನ ಉದ್ಘಾಟನಾ ಸಮಾರಂಭದ ವೇಳೆ ಟ್ರಸ್ಟ್‌ನ ಅಧ್ಯಕ್ಷ ಅರವಿಂದ್ ಭಟ್, ಕಾರ್ಯದರ್ಶಿ ಸುಪ್ರೀಂ ಬಿ.ಎಂ. ಹಾಗೂ ಟ್ರಸ್ಟಿ ಆಶಾ ಕೆ. ಭಟ್ ಅವರು ಟ್ರಸ್ಟ್‌ನಿಂದ ಸೇವಾಧಾಮದ ಹತ್ತು ಮಂದಿ ಫಲಾನುಭವಿಗಳಿಗೆ ಮೆಡಿಕಲ್ ಕಿಟ್, ಸೆಲ್ಫ್ ಕೇರ್ ಕಿಟ್, ವಾಕರ್ ಮತ್ತು ನೀರಿನ ಹಾಸಿಗೆಗೆ ರೂ. 30,000/- ದೇಣಿಗೆಯನ್ನು ನೀಡಿ ಸಹಕರಿಸಿದ್ದಾರೆ.

ಸೇವಾಭಾರತಿಯ ಟ್ರಸ್ಟಿ ಜೈರಾಜ್ ಸಾಲ್ಯಾನ್ ಕಾನರ್ಪ, ಉತ್ತರ ಕನ್ನಡ ಕ್ಷೇತ್ರ ಸಂಯೋಜಕ ಸುಧಾಕರ ಹಾಗೂ ದಕ್ಷಿಣ ಕನ್ನಡ ಮತ್ತು ಕೊಡಗು ಕ್ಷೇತ್ರ ಸಂಯೋಜಕಿ ಕುಸುಮಾಧರ ಅವರು ದೇಣಿಗೆಯನ್ನು ಸ್ವೀಕರಿಸಿ, ಸಂಸ್ಥೆಯ ಪರವಾಗಿ ಧನ್ಯವಾದವಿತ್ತರು. ಇನ್ನಷ್ಟು ಸೇವಾ ಕಾರ್ಯಗಳನ್ನು ಮಾಡುವ ಯಶಸ್ಸು ನಿಮ್ಮದಾಗಲಿ ಎಂದು ಶುಭಹಾರೈಸಿದರು.

LEAVE A REPLY

Please enter your comment!
Please enter your name here