






ಬೆಳ್ತಂಗಡಿ:ಮಾಣೂರು ಸಪರಿವಾರ ಶ್ರೀ ಶಾಸ್ತಾವು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗಿದೆ. ಈ ಹಿಂದೆ ಶಂಕುಸ್ಥಾಪನೆ ಸಂಧರ್ಭದಲ್ಲಿ ಧಾರ್ಮಿಕ ಮುಖಂಡ ಹಾಗೂ ಉದ್ಯಮ ಕಿರಣ್ ಚಂದ್ರ ಪುಷ್ಪಗಿರಿ ಈ ದೇವಸ್ಥಾನಕ್ಕೆ ಆಗಮಿಸಿ ಜೀರ್ಣೋದ್ಧಾರಕ್ಕೆ ಧನ ಸಹಾಯ ಮಾಡುವುದಾಗಿ ತಿಳಿಸಿದ್ದರು.


ಅದರಂತೆ ಮೊದಲಹಂತವಾಗಿ 1ಲಕ್ಷ ಮೊತ್ತ ಜೀರ್ಣೋದ್ಧಾರ ಸಮಿತಿಗೆ ನೀಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ಪವಿತ್ರ ಪಾಣಿ ಶ್ರೀ ಎಂ. ಕೃಷ್ಣ ಭಟ್ ಮಾಣೂರು, ಗೌರವ ಸಲಹೆಗಾರರಾದ ಗೋಪಾಲ ಪೂಜಾರಿ ಕೋಲಾಜೆ, ಸದಸ್ಯರುಗಳಾದ ಹೊನ್ನಪ್ಪ ಮೂಲ್ಯ ಮಾಣೂರು, ಪ್ರಶಾಂತ್ ಮೂಲ್ಯ ಮಾಣೂರು, ಸೀತಾರಾಮ ಮೂಲ್ಯ ಹರ್ಮಾಡಿ, ಪುರಂದರ ಗೌಡ ನೆಕ್ಕಿಲಾಜೆ, ಹರೀಶ್ ಪ್ರಭು ಮುದಲಡ್ಕ, ಸಿದ್ಧಿವಿನಾಯಕ ಭಜನಾ ಮಂಡಳಿ ಅಧ್ಯಕ್ಷ ದಿನೇಶ್ ಮೂಲ್ಯ ಕೊಂಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.









