ಹಿಂದೂ ಸಂಗಮ ಸಭೆ – ಆಮಂತ್ರಣ ಪತ್ರಿಕೆ ಬಿಡುಗಡೆ

0

ಬೆಳ್ತಂಗಡಿ: ಹಿಂದೂ ಸಮಾಜದಲ್ಲಿ ಶಾಂತಿ, ಸಾಮರಸ್ಯ, ಏಕತೆ ಹಾಗೂ ಸಾಂಸ್ಕೃತಿಕ ಜಾಗೃತಿಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ರಾಷ್ಟ್ರದಾದ್ಯಂತ ನಡೆಯುತ್ತಿರುವ ”ಹಿಂದೂ ಸಂಗಮ” ಕಾರ್ಯಕ್ರಮದ ಅಂಗವಾಗಿ, ಹಿಂದೂ ಸಂಗಮ ಆಯೋಜನಾ ಸಮಿತಿ, ಬೆಳ್ತಂಗಡಿ ತಾಲೂಕು ವತಿಯಿಂದ ತಾಲೂಕು ಆಯೋಜನಾ ಸಮಿತಿಯ ಪದಾಧಿಕಾರಿಗಳ ಹಾಗೂ ಮಂಡಲ ನಿರ್ವಹಣಾ ತಂಡದ ಪದಾಧಿಕಾರಿಗಳು ಪ್ರಶಿಕ್ಷಣ ವರ್ಗ ಮತ್ತು ಮಂಡಲ ಶಾ ನಡೆಯುವ ಹಿಂದೂ ಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕಣಿಯೂರು ರೈತ ಬಂಧು ಮಾಲಕ ಶಿವಶಂಕರ್ ನಾಯಕ್ ಬಿಡುಗಡೆ ಮಾಡಿದರು.

ಜ.5ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ಅಜಿತ್ ಶೆಟ್ಟಿ ಕೊರ್ಯಾರು ಸಭಾಧ್ಯಕ್ಷತೆ ವಹಿಸಿದ್ದರು. ಶಾಸಕ ಹರೀಶ್ ಪೂಂಜ, ತಾಲೂಕು ಸಂಘ ಚಾಲಕ ಗಣೇಶ್ ಕಾಂತಾಜೆ, ತಾಲೂಕು ಹಿಂದೂ ಸಂಗಮ ಸಮಿತಿ ಉಪಾಧ್ಯಕ್ಷರಾದ ಜಯಾ ಅನಂತಕೃಷ್ಣ ಕೊಯ್ಯೂರು, ಸಾಮಾಜಿಕ ಕಾರ್ಯಕರ್ತ ಸುಭಾಷ್ ಕಳೆಂಜ ಉಪಸ್ಥಿತರಿದ್ದರು.

ತಾಲೂಕು ಹಿಂದೂ ಸಂಗಮ‌‌ ಆಯೋಜನಾ ಸಮಿತಿಯ ಪದಾಧಿಕಾರಿಗಳು, ಸರ್ವಸದಸ್ಯರು, ಬೆಳ್ತಂಗಡಿ, ಬಾರ್ಯ, ಬಂದಾರು, ಕರಾಯ, ಮಡಂತ್ಯಾರು, ಗುರುವಾಯನಕೆರೆ ಹಾಗೂ ಲಾಯಿಲ ಮಂಡಲಗಳ ಹಿಂದೂ ಸಮಾಜದ ಬಾಂಧವರು ಭಾಗವಹಿಸಿದ್ದರು.

ತಾಲೂಕು ಹಿಂದೂ ಸಂಗಮ ಸಮಿತಿ ಸಂಚಾಲಕ ಅನಿಲ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಜೊತೆ ಕಾರ್ಯದರ್ಶಿ ತುಕಾರಾಮ್ ಬಿ. ಧನ್ಯವಾದಗೈದರು.

ಬಾರ್ಯ ಮಂಡಲ ಹಿಂದೂ ಸಂಗಮ ಸಭೆಯು ಜ.25ರಂದು, ಬಾರ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ, ಗುರುವಾಯನಕೆರೆಯ ಹಿಂದೂ ಸಂಗಮ ಸಭೆಯು ಜ.18ರಂದು, ಶಕ್ತಿನಗರ ನವಶಕ್ತಿ ಮೈದಾನದಲ್ಲಿ, ಕರಾಯದ ಹಿಂದೂ ಸಂಗಮ ಸಭೆಯು ಫೆ.2ರಂದು ಇಳಂತಿಲ ಗೋಕುಲ ಮೈದಾನದಲ್ಲಿ, ಲಾಯಿಲ ಹಿಂದೂ ಸಂಗಮ ಸಭೆಯು ಫೆ.1ರಂದು ಮಲೆಬೆಟ್ಟು ಶ್ರೀ ವನದುರ್ಗಾ ದೇವಸ್ಥಾನದ ವಠಾರದಲ್ಲಿ, ಮಡಂತ್ಯಾರು ಹಿಂದೂ ಸಂಗಮ ಸಭೆಯು ಜ.25ರಂದು ಪಂಚಕಟ್ಟೆ ಶ್ರೀ ಬಸವೇಶ್ವರ ದೇವಸ್ಥಾನ ಬಸವನಗುಡಿ ವಠಾರದಲ್ಲಿ, ಬಂದಾರು ಮಂಡಲ ಹಿಂದೂ ಸಂಗಮ ಸಭೆಯು ಜ.25ರಂದು ಕೊರಿಂಜ ಉರುವಾಲು ಶ್ರೀ ಪಂಷಲಿಂಗೇಶ್ವರ ಸಭಾ ಭವನದಲ್ಲಿ, ಬೆಳ್ತಂಗಡಿ ಮಂಡಲ ಹಿಂದೂ ಸಂಗಮ ಸಭೆಯು ಬೆಳ್ತಂಗಡಿ ಸಂತೆಕಟ್ಟೆ ಸಮಾಜಮಂದಿರದಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here