








ಬಂದಾರು: ಕೆಲೆಂಜಿಮಾರು ಗ್ರಾಮದ ನಾಗಶ್ರೀ ಗೆಳೆಯರ ಬಳಗದ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆ ಪೆಲತ್ತಿಮಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವಠಾರದಲ್ಲಿ ಡಿ. 4ರಂದು ನಡೆಯಿತು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಬಂದಾರು ಕೆಲೆಂಜಿಮಾರು ನಾಗಶ್ರೀ ಗೆಳೆಯರ ಬಳಗದ ಅಧ್ಯಕ್ಷ ಪುಷ್ಪರಾಜ್ ಗೌಡ ಕೆಲೆಂಜಿಮಾರು, ಕಾರ್ಯದರ್ಶಿ ಲೋಕೇಶ್ ಬಿ. ಬಂದಾರು, ಬಂದಾರು ಪಂಚಾಯತ್ ಸದಸ್ಯ ಚೇತನ್ ಗೌಡ ಪಾಲ್ತಿಮಾರ್ ಹಾಗೂ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.









