






ಮಲವಂತಿಗೆ: ಗ್ರಾಮದ ಕಜಕ್ಕೆ ನಿಸರ್ಗ ಮನೆ ನಿವಾಸಿ ವೀರೇಶ್ವರ ಮರಾಠೆ (68) ಅವರು ಅಲ್ಪಕಾಲದ ಅಸೌಖ್ಯದಿಂದ ಜ.4 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಉನ್ನತಿ ಮರಾಠೆ, ಮಕ್ಕಳಾದ ವಿವೇಕ್ ಮರಾಠೆ ಮತ್ತು ಪ್ರಣಿತ ಮರಾಠೆ ಅವರನ್ನು ಅಗಲಿದ್ದಾರೆ.


ಕೃಷಿಕರಾಗಿದ್ದ ಅವರು ತಾಳ ಮದ್ದಳೆ ಅರ್ಥಧಾರಿಯಾಗಿ, ಬಂಗಾಡಿ ಸಿಎ ಬ್ಯಾಂಕಿನ ನಿರ್ದೇಶಕರಾಗಿ, ಶಿರಾಡಿ ದೈವಸ್ಥಾನದ ಟ್ರಸ್ಟ್ ಅಧ್ಯಕ್ಷರಾಗಿ ಹಾಗೂ ಕಜಕ್ಕೆ ಗೋಪಾಲಕೃಷ್ಣ ದೇವಸ್ಥಾನದ ಟ್ರಸ್ಟಿ ಯಾಗಿ ಸೇವೆ ಸಲ್ಲಿಸಿದ್ದರು.









