








ಬೆಳ್ತಂಗಡಿ: ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ ಸಂಬಂಧ ಮಟ್ಟಣ್ಣನವರ್, ಜಯಂತ್, ವಿಠಲಗೌಡ ಪರ ಹಿರಿಯ ವಕೀಲ ದೊರೈರಾಜು ಬೆಳ್ತಂಗಡಿ ನ್ಯಾಯಾಲಯದಲ್ಲಿ ಜ.3ರಂದು ವಾದ ಮಂಡಿಸಿದರು. ತದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೊರೆರಾಜು “ನ್ಯಾಯಾಲಯದಲ್ಲಿ ವಾದ ಮಂಡಿಸಲು ಅವಕಾಶ ಕೇಳಿದ್ದೇವೆ. ನ್ಯಾಯಾಲಯ ಜ. 23ರಂದು ವಾದಕ್ಕೆ ನ್ಯಾಯಾಲಯ ಅವಕಾಶ ನೀಡಿದೆ. ಧರ್ಮಸ್ಥಳ ಪರವಾದ ಸಿ ವಿ ನಾಗೇಶ್ ರವರ ಅರ್ಜಿಗೆ ತರಕಾರು ಇದೆ. SIT ವರದಿ ಪರಿಪೂರ್ಣ ಅಲ್ಲ, SIT ವರದಿ ವಿರುದ್ಧ ನಮ್ಮ ತಕರಾರು ಇದೆ. ವರದಿ ರಿಜೆಕ್ಟ್ ಮಾಡಬೇಕು ಅಂತ ನ್ಯಾಯಾಧೀಶರಲ್ಲಿ ಕೇಳಿಕೊಂಡಿದ್ದೇವೆ. ಬೆಳ್ತಂಗಡಿಯಲ್ಲಿ ವಕೀಲ ದೊರೆಸ್ವಾಮಿ ಹೇಳಿಕೆ.









