






ನಿಡ್ಲೆ: ಬೆಳ್ತಂಗಡಿಯ ನಿಡ್ಲೆಯ ಬರಂಗಾಯದಲ್ಲಿರುವ ಅಗ್ರಿಲೀಫ್ ಎಕ್ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಅಗ್ರಿ ಮೀಟ್ – 2026 ರೈತರ ಜತೆ ವಿಶ್ವದ ಕಡೆ ಕಾರ್ಯಕ್ರಮದ ಭಾಗವಾಗಿ “ರೈತ-ಸಂಸ್ಥೆ’’ ಸಮನ್ವಯ ಸಭೆಯನ್ನು ಜ.3ರಂದು ಉದ್ಘಾಟನೆಗೊಂಡಿತು.
ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆ ಅವರು ಕಾರ್ಯಕ್ರಮ ಉದ್ಘಾಟಸಿದರು. ಅಗ್ರಿಲೀಫ್ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಗ್ರಿಲೀಫ್ ಸಂಸ್ಥೆ ಸ್ಥಾಪಕ ಅವಿನಾಶ್ ರಾವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅಗ್ರಿಲೀಫ್ ಸಂಸ್ಥೆ ಬೆಳೆದು ಬಂದ ಬಗೆ ಹಾಗೂ ಎದುರಿಸಿದ ಸವಾಲುಗಳು, ಸಿಬ್ಬಂದಿ ಸಹಕಾರಗಳ ಬಗ್ಗೆ ವಿವರಿಸಿದರು.

ಮಂಗಳೂರು ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆ, ತಾಲೂಕು ತೋಟಗಾರಿಕೆ ಇಲಾಖೆ ಜಂಟಿ ಸಹಾಯಕ ಕೃಷಿ ನಿರ್ದೇಶಕ ಚಂದ್ರಶೇಖರ್ ಕೆ.ಎಸ್., ರಬ್ಬರ್ ಸೊಸೈಟಿ ಉಪಾಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ಅಗ್ರಿಲೀಫ್ ಸಹ ಸಂಸ್ಥಾಪಕ ಅತಿಶಯ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ತಾಲೂಕಿನ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು, ತಾಲೂಕಿನ ಹಾಲು ಉತ್ಪಾದಕ ಸಂಘಗಳ ಪ್ರತಿನಿಧಿಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಪ್ರತಿನಿಧಿಗಳು ವಿಶೇಷ ಆಹ್ವಾನಿತರಾಗಿ ಭಾಗಿಯಾದರು.
ಅಗ್ರಿಲಿಫ್ ಸಂಸ್ಥೆಗೆ ಕಳೆದ ಹಲವು ವರ್ಷಗಳಿಂದ ಹಾಳೆ ನೀಡಿ ಸಹಕರಿಸಿದ ಪ್ರಮುಖರು, ಅಗ್ರಿಲೀಫ್ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.

ಪರಿಸರ ಉತ್ಪನ್ನಗಳ ಮೂಲಕ ಗಮನಸೆಳೆದಿರುವ ಅಗ್ರಿಲೀಫ್ ಸಂಸ್ಥೆ ತನ್ನೊಂದಿಗೆ ರೈತರು, ಕೃಷಿಕರನ್ನು ಹೆಚ್ಚೆಚ್ಚು ತೊಡಗಿಸಿಕೊಳ್ಳುವ ಮತ್ತು ಅವರಿಗೂ ಲಾಭದ ಹಾದಿ ಕಂಡುಕೊಳ್ಳುವ ಉದ್ದೇಶ ಹೊಂದಿದ್ದು, ಇದರ ಭಾಗವಾಗಿ ರೈತ-ಸಂಸ್ಥೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಕೇವಲ ಹಾಳೆ ತ್ಯಾಜ್ಯ ಮಾತ್ರವಲ್ಲದೆ, ಅನೇಕ ಕೃಷಿ ತ್ಯಾಜ್ಯಗಳನ್ನು ಬಳಸಿಕೊಂಡು ವಿವಿಧ ಉತ್ಪನ್ನಗಳನ್ನು ಸಿದ್ಧಪಡಿಸಲು ಅಗ್ರಿಲೀಫ್ ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ವಿವಿಧ ಕೃಷಿ ತ್ಯಾಜ್ಯಗಳ ಸಂಗ್ರಹಕ್ಕೆ ರೈತರನ್ನು ಸೊಸೈಟಿ, ಪಂಚಾಯತ್‌ಗಳನ್ನು ಬಳಸಿಕೊಳ್ಳುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಂವಾದ-ಸಮಾಲೋಚನೆ ನಡೆಸಲಾಯಿತು.
ನಿಡ್ಲೆಯ ಆದಿತ್ಯ ವ್ಯೂ ಹೊಟೇಲ್‌ನ ಪಂಚವಟಿ ಹಾಲ್‌ನಲ್ಲಿ ಈ ಕಾರ್ಯಕ್ರಮ ನಡೆಯಿತು.









