







ಧರ್ಮಸ್ಥಳ: ಧರ್ಮಸ್ಥಳದ ಶ್ರೀ ಧ. ಮಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಬ್ಸ್ ಬುಲ್ ಬುಲ್ಸ್ ವಿದ್ಯಾರ್ಥಿಗಳಿಂದ ವಾಲ್ ಆಫ್ ಗುಡ್ ವಿಲ್ ಗೆ ಉಡುಪುಗಳ ಹಸ್ತಾಂತರ ಮಾಡಲಾಯಿತು. ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಧರ್ಮಸ್ಥಳದ ಕಬ್ಸ್ ಬುಲ್ ಬುಲ್ಸ್ ಸುಮಾರು 108 ವಿದ್ಯಾರ್ಥಿಗಳು ವಾಲ್ ಆಫ್ ಗುಡ್ ವಿಲ್ ಗೆ ತಾವು ಉಪಯೋಗಿಸಿದ ಹಳೆಯ ಉಡುಪುಗಳು ಹಾಗೂ ಬಳಸದೆ ಇರುವ ಉಪಯೋಗಿಸದೆ ಇರುವ ಉಡುಪುಗಳನ್ನು ಸಂಗ್ರಹಿಸಿ ಉಜಿರೆಯಲ್ಲಿರುವ ವಾಲ್ ಆಫ್ ಗುಡ್ ವಿಲ್ ಗೆ ಹಸ್ತಾಂತರಿಸುವ ಒಂದು ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡರು.


ಉಜಿರೆ ಶ್ರೀ ಧ. ಮಂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಶಾರದಾ ಅವರು ಬಟ್ಟೆಗಳನ್ನು ಸಂಗ್ರಹಿಸಿ ಇಡಲು ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ನಮಗೆ ಸಹಕರಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಶಾಲಾ ಫ್ಲಾಕ್ ಲೀಡರ್ ಗಳಾದ ಸೌಮ್ಯ, ದಿವ್ಯ ಪದ್ಮಶ್ರೀ ಕಬ್ ಮಾಸ್ಟರ್ ಗಳಾದ ಅಮೃತ ವಿ. ಶೆಟ್ಟಿ, ಕಾದಂಬರಿ ಸಂದೀಪ್, ಹೇಮಾವತಿ ಜೈನ್ ಸಹಕರಿಸಿದರು. ಶಾಲಾ ಮುಖ್ಯ ಶಿಕ್ಷಕಿ ಪರಿಮಳ ಎಂ.ವಿ. ಅವರ ಮಾರ್ಗದರ್ಶನದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.









