








ಬೆಳ್ತಂಗಡಿ: ವಿಶ್ವ ಕ್ಯಾನ್ಸರ್ ದಿನದ (ನವೆಂಬರ್ ೭) ಆಚರಣೆಯ ಪ್ರಯುಕ್ತ ವಿಮುಕ್ತಿ ಒಕ್ಕೂಟದಿಂದ ಡಿಸೆಂಬರ್ ತಿಂಗಳಿನಲ್ಲಿ ಒಕ್ಕೂಟದ ಏಳು ಘಟಕಗಳಾದ ಗರ್ಡಾಡಿ, ತೆಕ್ಕಾರು, ಬಂಗಾಡಿ, ಬದ್ದ್ಯಾರು, ಕೊಲ್ಪಾಡಿ, ಮುಂಡಾಜೆ, ಮೂಲಾರು ಹಾಗೂ ಗುರಿಪಳ್ಳದಲ್ಲಿ ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಹಿಳೆಯರಲ್ಲಿ ಕಂಡುಬರುವ ಈ ಎರಡೂ ಕ್ಯಾನ್ಸರ್‌ನ ರೋಗ ಲಕ್ಷಣಗಳು, ಪತ್ತೆ ಹಚ್ಚುವ ಕ್ರಮ ಮತ್ತು ಚಿಕಿತ್ಸಾ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಯಿತು. ಸಂಸ್ಥೆಯಿಂದ ರೋಹಿಣಿ, ಸವಿತಾ, ವಸಂತಿ ಹಾಗೂ ಮೋಹಿನಿಯವರು ಹಾಜರಿದ್ದು ಕಾರ್ಯಕ್ರಮ ನೆರವೇರಿಸಿದರು. ಒಟ್ಟು 94 ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಆರೋಗ್ಯ ಮಾಹಿತಿ ಪಡೆದುಕೊಂಡರು. ಆಯಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದು, ಸಂಘದ ಸದಸ್ಯರು ಸ್ವಾಗತಿಸಿ ಕಾರ್ಯಕ್ರಮದ ನಂತರ ವಂದನಾರ್ಪಣೆ ಸಲ್ಲಿಸಿದರು.









