








ಬೆಳಾಲು: ಬೆಳಾಲಿನ ನಿವೃತ್ತ ಮುಖ್ಯ ಶಿಕ್ಷಕ ದಿ. ಸುಬ್ರಾಯ ತೋಡ್ತಿಲ್ಲಾಯರ ಪುತ್ರ ವಿದ್ವಾನ್ ಹೆಚ್. ಸತ್ಯನಾರಾಯಣ ಆಚಾರ್ಯ ಇವರಿಗೆ ಪೇಜಾವರ ಮಠದಿಂದ 2025ನೇ ಸಾಲಿನ ಶ್ರೀವಿಜಯಧ್ವಜ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯನ್ನು ಶಾಸ್ತ್ರ ಮತ್ತು ವೇದಾಂತ ವಿಭಾಗದಲ್ಲಿ ವಿಶೇಷ ಸೇವೆ ಸಲ್ಲಿಸಿದ ವಿದ್ವಾಂಸರಿಗೆ ನೀಡಲಾಯಿತು. ಡಿ 23ರಂದು ಶ್ರೀ ವಿಶ್ವೇಶ ತೀರ್ಥಶ್ರೀ ಪಾದರ ಆರನೇಯ ಮಹಾ ಸಮಾರಾಧನೆಯ ವಿಶ್ವಸಂಭ್ರಮ ಕಾರ್ಯಕ್ರಮದಲ್ಲಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸುವರ್ಣ ಕಂಕಣವನ್ನು ತೊಡಿಸಿ ಪ್ರಶಸ್ತಿಪ್ರದಾನ ಮಾಡಿದರು.









