ಪುಂಜಾಲಕಟ್ಟೆ: ಬಸವನಗುಡಿಯಲ್ಲಿ ಟೈಲ್ಸ್, ಗ್ರಾನೈಟ್ಸ್, ಸ್ಯಾನಿಟರಿ ಪರಿಕರಗಳ ಹೊಸ ಮಳಿಗೆ ಪಿವೈ ಟ್ರೇಡಿಂಗ್ ಸ್ಯಾನಿಟರಿ ಶುಭಾರಂಭ

0

ಬೆಳ್ತಂಗಡಿ: ಅತ್ಯುತ್ತಮ ಗುಣಮಟ್ಟದ ಟೈಲ್ಸ್, ಗ್ರಾನೈಟ್ಸ್ ಮತ್ತು ಸ್ಯಾನಿಟರಿ ಪರಿಕರಗಳ ಹೊಸ ಮಳಿಗೆ ಪುಂಜಾಲಕಟ್ಟೆಯ ಬಸವನಗುಡಿಯಲ್ಲಿ ನಿರ್ಮಾಣವಾಗಿದ್ದು, ಇದರ ಉದ್ಘಾಟನೆಯನ್ನು ಡಿ.28ರಂದು ಶಾಸಕ ಹರೀಶ್‌ ಪೂಂಜ ನೆರವೇರಿಸಿದರು. ಮುಖ್ತ ಅತಿಥಿಗಳಾಗಿ ಉದ್ಯಮಿಗಳಾದ ಶಶಿಧರ್‌ ಶೆಟ್ಟಿ ಬರೋಡ ಉಪಸ್ಥಿತರಿದ್ದರು.

ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪಾ ಎ. ಎಸ್, ಮಡಂತ್ಯಾರು ವರ್ತಕರ ಸಂಘದ ಅಧ್ಯಕ್ಷ ಬಿ. ಜಯಂತ್ ಶೆಟ್ಟಿ, ಪುಂಜಾಲಕಟ್ಟೆ ಪ್ರಾ.ಕೃ.ಪ. ಸಹಕಾರಿ ಸಂಘದ ಅಧ್ಯಕ್ಷ ತುಂಗಪ್ಪ ಬಂಗೇರ, , ಮಡಂತ್ಯಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜೋಯೆಲ್ ಮೆಂಡೋನ್, ನವಶಕ್ತಿ ರಾಜೇಶ್‌ ಶೆಟ್ಟಿ, ವಿಜಯ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಅಜಿತ್‌ ಶೆಟ್ಟಿ ಕಾವಳಮೂಡೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪದ್ಮಶೇಖ‌ರ್ ಜೈನ್, , ಜಿಲ್ಲಾ ಅಡಕೆ ಮತ್ತು ಕೃಷಿ ಉತ್ಪನ್ನಗಳ ವರ್ತಕರ ಸಂಘದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಬೆಳ್ತಂಗಡಿ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಕಾರ್ಯಾಧ್ಯಕ್ಷ ಬಿ. ರಾಜಶೇಖರ್ ಶೆಟ್ಟಿ ಮಡಂತ್ಯಾರು, ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಅಧ್ಯಕ್ಷ ದಿವಾಕರ್ ಶೆಟ್ಟಿ, ನಿವೃತ್ತ ಉಪಾಧ್ಯಾಯ ಕೃಷ್ಣ ಉಪಾಧ್ಯಾಯ, ಪಿವೈ ಟ್ರೇಡಿಂಗ್ ಸ್ಯಾನಿಟರಿ ಮಾಲಕರಾದ ಸುಮಲತಾ ಚೇತನ್‌ ಶೆಟ್ಟಿ ಪಾತಿಲ, ಚೇತನ್‌ ಶೆಟ್ಟಿ ಪಾತಿಲ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

ಪಿ.ವೈ ಟ್ರೇಡಿಂಗ್ ನ ವಿಶೇಷತೆ: ವಿಶಾಲವಾದ ಗೋಡೌನ್ ಹೊಂದಿರುವ ಪಿವೈ ಟ್ರೇಡಿಂಗ್ ಶೋ ರೂಮ್ ಅತ್ಯುತ್ತಮ ಗುಣಮಟ್ಟದ ಪರಿಚಯಕ್ಕೆ ಮುಂದಾಗಿದೆ. ನಿಮ್ಮ ಮನೆಯ ಅಂದವನ್ನು ಹೆಚ್ಚಿಸುವ ಜೊತೆಗೆ ಒಮ್ಮೆ ಅಳವಡಿಸಿದರೆ ನಿಶ್ಚಿಂತೆಯಿಂದ ಇರಬೇಕು ಎಂಬ ದೃಷ್ಟಿಕೋನದೊಂದಿಗೆ ಪಿ ವೈ ಟ್ರೇಡಿಂಗ್ ನಲ್ಲಿ ಅತ್ಯುತ್ತಮ ಗುಣಮಟ್ಟದ ಟೈಲ್ಸ್, ಗ್ರಾನೈಟ್‌ಗಳನ್ನು ಮಾರಾಟಕ್ಕಿಡಲಾಗಿದೆ.

LEAVE A REPLY

Please enter your comment!
Please enter your name here