ಶ್ರೀ ಶಿಶಿಲೇಶ್ವರ ದೇವಸ್ಥಾನದ ಅರ್ಚಕ ಲಕ್ಷ್ಮೀನಾರಾಯಣ ಮಂಚಿತ್ತಾಯ ನಿಧನ

0

ಶಿಶಿಲ: ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ಕಳೆದ 14ವರ್ಷಗಳಿಂದ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದ ಲಕ್ಷ್ಮೀನಾರಾಯಣ ಮಂಚಿತ್ತಾಯ(53) ಕಳೆದ ಕೆಲವು ದಿನಗಳಿಂದ ಬ್ರೈನ್ ಹೆಮರೇಜ್ ನಿಂದಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದೇ ಡಿ. 27ರಂದು ದೈವಾದೀನರಾಗಿದ್ದಾರೆ. ಮೃತರು ಮೂಲತಃ ಬೆಳ್ತಂಗಡಿ ತಾಲೂಕಿನ ಸವಣಾಲ್ ಗ್ರಾಮದವರಾಗಿದ್ದು ತಂದೆ ಕೃಷ್ಣ ಭಟ್, ಹೆಂಡತಿ ವಿಶಾಲಾಕ್ಷಿ ಹಾಗೂ ಮಕ್ಕಳಾದ ಪ್ರಜ್ಞಾ, ಪೂಜಾ, ಪೃಥ್ವಿ ಮತ್ತು ಪ್ರಿಯಾ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here