ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯ ಸಾಮಾಜಿಕ ಪರಿಶೋಧನಾ ಪೋಷಕರ ಸಭೆ

0

ಬಂಟ್ವಾಳ: ಡಿ.20ರಂದು ಬಂಟ್ವಾಳ ತಾಲೂಕಿನ ಎಸ್ ವಿ ಎಸ್ ದೇವಳ ಕಿರಿಯ ಪ್ರಾಥಮಿಕ ಶಾಲೆ ಬಂಟ್ವಾಳ ಇಲ್ಲಿ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯ ಸಾಮಾಜಿಕ ಪರಿಶೋಧನಾ ಪೋಷಕರ ಸಭೆ ನಡೆಯಿತು.

ಸಭಾಧ್ಯಕ್ಷತೆಯನ್ನು ಶೇಷಗಿರಿ ನಾಯಕ್ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಂಟ್ವಾಳ ತಾಲೂಕು ಇವರು ವಹಿಸಿದ್ದರು. ಇವರು ತಮ್ಮ ಮಾತಿನಲ್ಲಿ ಪಿ.ಎಂ.ಪೋಷಣ್ ಯೋಜನೆಯು ಮಕ್ಕಳ ಹಸಿವನ್ನು ನೀಗಿಸುವುದರೊಂದಿಗೆ ಕಲಿಕೆಯಲ್ಲಿ ಸಾಧನೆಯನ್ನು ಮಾಡುವಂತಾಗಿದೆ ಎಂದು ತಿಳಿಸಿದರು. ಈ ಕುರಿತು ಪೋಷಕರೊಂದಿಗೆ ಮಾತುಕತೆ ನಡೆಸಲಾಯಿತು.

ಪರಿಶೋಧನಾ ಪ್ರಕ್ರಿಯೆ ಭಾಗವಾದ ದಾಖಲಾತಿಗಳ ಪರಿಶೀಲನೆ, ಭೌತಿಕ ಪರಿಶೀಲನೆ ಹಾಗೂ ಪೋಷಕರ ಮನೆ ಭೇಟಿಯ ಕುರಿತಾದ ಮಾಹಿತಿ ಸಂಗ್ರಹಣೆಯನ್ನು ಮಾಡಿ ವರದಿ ಮಂಡನೆ ಮಾಡಲಾಯಿತು. ಇದಕ್ಕೆ ಪೂರಕವಾಗಿ ಪೋಷಕರೊಂದಿಗೆ ಚರ್ಚೆ ನಡೆಸಿ ಅವರ ಅಭಿಪ್ರಾಯ ಹಾಗೂ ಸಲಹೆಗಳನ್ನು ಪಡೆದುಕೊಳ್ಳಲಾಯಿತು.

ಸಭೆಯಲ್ಲಿ ಮುಖ್ಯ ಶಿಕ್ಷಕಿ ಸುರೇಖಾ ಕೆ., ಎಸ್.ಡಿ.ಎಂ.ಸಿ ಸದಸ್ಯರು, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಜಯಲಕ್ಷ್ಮಿ, ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಧರ್ಮಾವತಿ ಮತ್ತು ಮೇಘನಾ, ಪೋಷಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here