






ಉಜಿರೆ: ಪವಾಡ ಪುರುಷ ಸಂತ ಅಂತೋನಿಯವರಿಗೆ ಸಮರ್ಪಿಸಿದ ನವೀಕೃತ ಸಂತ ಅಂತೋನಿ ಚರ್ಚ್ ಡಿ. 22ರಂದು ಉದ್ಘಾಟನೆ ಹಾಗೂ ಆಶೀರ್ವಚನ ನಡೆಯಿತು.

ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಅಧ್ಯಕ್ಷತೆ ವಹಿಸಿದ್ದು, ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ, ಉಜಿರೆ ಜನಾರ್ಧನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೇಟನ್ನಾಯ, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಉಷಾ ಕಿರಣ್ ಕಾರಂತ್, ಉಜಿರೆ ಜುಮ್ಮಾ ಮಸೀದಿಯ ಅಧ್ಯಕ್ಷ ಜನಾಬ್ ಅಬೂಬಕ್ಕರ್ ಯು.ಹೆಚ್. ರವರು ಅತಿಥಿಗಳಾಗಿ ಭಾಗವಹಿಸಿದ್ದರು.




ಪಾಲನ ಮಂಡಳಿ ಉಪಾಧ್ಯಕ್ಷ ಅಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್, ಆಯೋಗ ಸಂಯೋಜಕಿ ಲವೀನಾ ಫೆರ್ನಾಂಡಿಸ್, ಈ ಸಭಾ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಮಿಕ್ಕಿ ದಾನ ನೀಡಿದ ದಾನಿಗಳಿಗೆ, ಇಂಜಿನಿಯರ್ ಅಜಯ್ ಡಿಕುನ್ಹ, ಗುತ್ತಿಗೆದಾರ ಅನಿಲ್ ಡಿಸೋಜ, ಮೇಲ್ವಿಚಾರಕ ಪ್ರವೀಣ್ ವಿಜಯ್ ಡಿಸೋಜ, ಕಾರ್ಮಿಕ ವರ್ಗದವರನ್ನು ಗೌರವಿ ಸನ್ಮಾನಿಸಲಾಯಿತು.


ಚರ್ಚ್ ಪ್ರಧಾನ ಧರ್ಮ ಗುರು ಅಬೆಲ್ ಲೋಬೊ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ವಿಶಾಲ್ ಪಿಂಟೊ ಕಾರ್ಯಕ್ರಮ ನಿರೂಪಿಸಿ, ಪಾಲನ ಮಂಡಳಿ ಕಾರ್ಯದರ್ಶಿ ಲಿಗೋರಿ ವಾಸ್ ವಂದಿಸಿದರು.









