






ನೆರಿಯ: ಸಂತ ಥೋಮಸರ ಅನುದಾನಿತ ಪ್ರೌಢಶಾಲೆಯ ಶಾಲಾ ವಾರ್ಷಿಕೋತ್ಸವ ಮತ್ತು ನೂತನ ಧರ್ಮಾಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮ ಡಿ. 20 ರಂದು ನಡೆಯಿತು.
ಕಾರ್ಯಕ್ರಮಕ್ಕೆ ಪರಮ ಪೂಜ್ಯ ಬೆಳ್ತಂಗಡಿ ಧರ್ಮಾಧ್ಯಕ್ಷರಾದ ಫಾ.ಜೆಮ್ಸ್ ಪಟ್ಟೆರಿಲ್ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಮುರಳಿಕೃಷ್ಣ ಇರ್ವತ್ರಾಯ, ಪ್ರೌಢಶಾಲೆಯ ಸಂಚಾಲಕ ಚರ್ಚ್ ನ ಧರ್ಮಗುರು ಫಾ.ಜೋಸ್ ಆಯಂಕುಡಿ, ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಫಾ.ಶಾಜಿ ವೆಟ್ಟಂತಡತ್ತಿಲ್, ಪೋಷಕ ಸಂಘದ ಅಧ್ಯಕ್ಷ ನಜಿರ್ ಶಾಲಾ ಮುಖ್ಯ ಶಿಕ್ಷಕಿ ತ್ರೇಸಿಯಾ, ವೇದಿಕೆಯಲ್ಲಿ ಉಪಸ್ಥಿತರಿದ್ದರು.



ಸನ್ಮಾನ: ಶ್ರೀ ಕೃಷ್ಣ ಆಸ್ಪತ್ರೆಯ ಆಡಳಿತ ನಿರ್ದೇಶಕ ಶಾಲೆಯ ಹಳೆ ವಿದ್ಯಾರ್ಥಿಯಾದ ಡಾ.ಮುರಳಿಕೃಷ್ಣ ಇರ್ವತ್ರಾಯ ಅವರ ವೈದ್ಯಕೀಯ ಸೇವೆಗೆ ಹಾಗೂ ಫಾ.ಜೋಸ್ ಆಯಂಕುಡಿ, ಶಾಲೆಯ ಅಡುಗೆ ಸಹಾಯಕಿ ರೇವತಿ ಸೇವೆಗೆ ಹಾಗೂ ಶಾಲೆ ಹಳೆ ವಿದ್ಯಾರ್ಥಿ ಸಹ್ಯಾದ್ರಿ ಕ್ರಿಯೇಷನ್ ನಿರ್ದೇಶಕ ಕಲಾವಿದ ರಂಜನ್ ಕುಮಾರ್ ನೆರಿಯ ಅವರ ಕಲಾ ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬೆಳ್ತಂಗಡಿ ಧರ್ಮಾ ಪ್ರಾಂತ್ಯದ ನೂತನ ಧರ್ಮಾಧ್ಯಕ್ಷ ಫಾ.ಜೆಮ್ಸ್ ಪಟ್ಟೆರಿಲ್ ಅವರಿಗೆ ಶಾಲೆಯಿಂದ ಅಭಿನಂದನಾ ಕಾರ್ಯಕ್ರಮ ಹಾಗೂ ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಚಿತ್ರ ಕಲೆಯಲ್ಲಿ ಮೈಸೂರು ವಿಭಾಗಿಯ ಮಟ್ಟಕ್ಕೆ ಆಯ್ಕೆಯಾದ ಶಾಲೆ ವಿದ್ಯಾರ್ಥಿಗೆ ಪ್ರಮಾಣ ಪತ್ರ ನೀಡಿದರು.

ಗಣ್ಯರು ಹಾಗೂ ವಿದ್ಯಾರ್ಥಿ ಪೊಷಕರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ತ್ರೇಸಿಯಾ ಸ್ವಾಗತಿಸಿದರು. ಕಲಾ ಶಿಕ್ಷಕ ತೋಮಸ್ ಪಿ.ಎ. ನಿರೂಪಿಸಿದರು. ಶಿಕ್ಷಕಿ ಅನಿತಾ ವಂದಿಸಿದರು.









