







ಬೆಳ್ತಂಗಡಿ :ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೊರಂಜ, ಮತ್ತು ಮಚ್ಚಿನ ಸ. ಪ್ರಾ. ಶಾಲೆಗೆ ಈಗಾಗಲೇ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಂಜೂರಾಗಿದ್ದು, ಮುಂದಿನ ವರ್ಷ ಎಲ್. ಕೆ. ಜಿ ತರಗತಿ ಆರಂಭವಾಗಲಿಕ್ಕಿದ್ದು, ಅತಿ ಶೀಘ್ರದಲ್ಲಿ ಶಾಲೆಗೆ ಅನುದಾನ ಬಿಡುಗಡೆ ಮಾಡುವಂತೆ ಶಾಲಾ ಅಭಿವೃದ್ಧಿ ಸಮಿತಿಯಿಂದ ಸಚಿವರನ್ನು ವಿನಂತಿಸಲಾಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರ ಮುತುವರ್ಜಿ ಯಿಂದ ಮಂಜೂರಾಗಿದ್ದು,


ಕೊರಿಂಜ ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷ ಹರೀಶ್ ಕುಮಾರ್, ಸದಸ್ಯರು, ಶಾಲಾ ಮುಖ್ಯ ಶಿಕ್ಷಕಿ, ಶಿಕ್ಷಕ ವೃಂದ,ದೈಹಿಕ ಶಿಕ್ಷಕರು,ಗ್ರಾಮ ಪಂಚಾಯಿತಿಯ ಸದಸ್ಯರು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಸನ್ಮಾನಿಸಿದರು.









