






ಗೇರುಕಟ್ಟೆ: ಖಾಝಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ನಿರ್ದೇಶನದಂತೆ ಕಾಜೂರು ತಂಙಳ್ ರವರು ಪರಪ್ಪು ಜಮಾಅತಿನ ಗೌರವಾದ್ಯಕ್ಷರಾಗಿ ಡಿ.19ರಂದು ಅಧಿಕಾರ ಸ್ವೀಕರಿಸಿದರು.


ನಂತರ ದುಅ ನೆರವೇರಿಸಿ ಮಹಾಸಭೆ ನಡೆಸಿಕೊಟ್ಟರು. ಖತೀಬ್ ಎಫ್.ಎಚ್.ಮಹಮ್ಮದ್ ಮಿಸ್ಬಾಹಿ ಅಲ್ ಫುರ್ಖಾನಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ಅಬೂಬಕ್ಕರ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಗತ ವರ್ಷದ ವರದಿ ಮತ್ತು ಜಮಾ ಖರ್ಚಿನ ವಿವರವನ್ನು ಅಬ್ದುಲ್ ಕರೀಮ್ ಸಭೆಗೆ ಓದಿ ಹೇಳಿದರು. ಮಹಾಸಭೆಯಲ್ಲಿ ಮೊಹಲ್ಲಾದ ಅಭಿವೃದ್ಧಿಗಾಗಿ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಕೆಲ ಸದಸ್ಯರು ಸಲಹೆಗಳನ್ನು ನೀಡಿದರು. ಜಮಾಅತರ ಅಭಿಪ್ರಾಯ ಪಡೆದು ಹೊಸ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಮುಪತ್ತಿಸ್ ಮುಹಮ್ಮದ್ ಹನೀಫ್ ಮಿಸ್ಬಾಹಿ ಅಲ್ ಅಫ್ಳಲಿ, ಪ್ರಧಾನ ಕಾರ್ಯದರ್ಶಿಯಾಗಿ ಎಚ್ ಎಸ್ ಸೈಫುಲ್ಲ, ಕೋಶಾದಿಕಾರಿಯಾಗಿ ಅಬ್ದುಲ್ ಬಶೀರ್ ಟಿಂಬರ್, ಉಪಾದ್ಯಕ್ಷರಾಗಿ ಮೊಹಮ್ಮದ್ ಹನೀಫ್ ಬಿ.ಐ., ಅಬ್ದುಲ್ಲ ಕುಂಙ ದಾರಿಮಿ, ಸದಸ್ಯರಾಗಿ ಅಬ್ದುಲ್ ಕರೀಮ್ ಗೇರುಕಟ್ಟೆ, ಬಿ.ಕೆ. ರವೂಫ್ ಹಾಜಿ, ಎನ್.ಎನ್ ಮಹಮ್ಮದ್, ಅಬ್ದುಲ್ಲ ಎಸ್. ಯು., ಅಬೂಬಕ್ಕರ್ ಕೆ.ಎಮ್., ಶರೀಫ್ ಜಿ. ಆಯ್ಕೆಯಾದರು.









