ತೆಕ್ಕಾರು: ಹೆಗ್ಗಡೆಹಿತ್ತಿಲು ಸೇತುವೆಯನ್ನು ನಿರ್ಮಿಸಲು ಅನುದಾನ ನೀಡಲು ಮನವಿ

0

ಬೆಳ್ತಂಗಡಿ: ತಾಲೂಕು ತೆಕ್ಕಾರು ಗ್ರಾಮದ ಉರಡ್ಕದಿಂದ ಪ್ರಾರಂಭಗೊಂಡು ಗೋದಾಮುಗುಡ್ಡೆ, ಸರಳಿಕಟ್ಟೆ, ಮೂಡಡ್ಕ, ಕೊಡಂಗೆ ಹೀಗೆ ಹಲವು ಪ್ರದೇಶಗಳ ಮೂಲಕ ಸುಮಾರು 13 ಕಿಲೋ ಮೀಟರ್ ಹರಿದು ಬರುತ್ತಿರುವ ಸುಮಾರು 8 ಮೀಟರ್ ಅಗಲವನ್ನು ಹೊಂದಿರುವ ತೋಡು ಆಗಿರುತ್ತದೆ ಈ ಹೆಗ್ಗಡೆಹಿತ್ತಿಲು. ಈ ಹೆಗ್ಗಡಹಿತ್ತಿಲು ತೋಡುವಿಗೆ ಹಳೆಯ ಮೋರಿಯಿಂದ ನಿರ್ಮಿತವಾದ ಇಕ್ಕೆಲದಲ್ಲಿ ತಡೆಗೋಡೆ ಇಲ್ಲದ ತಾತ್ಕಾಲಿಕ ಸೇತುವೆ ಇತ್ತು. ಆದರೆ ಕಳೆದ ಮಳೆಗಾಲದಲ್ಲಿ ಅದು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿರುತ್ತದೆ. ಇವಾಗ ಸೇತುವೆ ಇಲ್ಲದೆ ಇರುವುದರಿಂದ ಇಲ್ಲಿನ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶದವರಿಗೆ ತುಂಬಾ ಕಷ್ಟಕರವಾಗಿರುತ್ತದೆ.

ಈ ಪ್ರದೇಶ ಹಲವಾರು ವಿದ್ಯಾರ್ಥಿಗಳು, ರೈತಾಪಿ ಕುಟುಂಬಗಳು ಇರುವ ಪ್ರದೇಶವಾಗಿರುತ್ತದೆ. ಇದೇ ತೋಡುವಿನ ಮೂಲಕ ರೈತರು, ವಿದ್ಯಾರ್ಥಿಗಳು ಹಾದು ಹೋಗಬೇಕಾಗಿರುತ್ತದೆ. ಅಲ್ಲದೆ ಸಿ.ಎ ಬ್ಯಾಂಕ್, ಗ್ರಾಮ ಪಂಚಾಯತ್, ಆರೋಗ್ಯ ಕೇಂದ್ರ ಮತ್ತು ಮುಖ್ಯ ರಸ್ತೆಯನ್ನು ಸಂಪರ್ಕಿಸುವ ರಸ್ತೆಯಾಗಿರುತ್ತದೆ ಈ ಹೆಗ್ಗಡಹಿತ್ತಿಲು.

ಮಳೆಗಾಲದಲ್ಲಂತೂ ತುಂಬಾ ಅಪಾಯಕಾರಿಯಾಗಿ ಇದರಲ್ಲಿ ನೀರು ಹರಿಯುತ್ತಿರುವುದರಿಂದ ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಸನ್ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ ಈ ಹೆಗ್ಗಡೆಹಿತ್ತಿಲು ತೋಡುವಿಗೆ ಸೇತುವೆಯನ್ನು ನಿರ್ಮಿಸಲು ಅನುದಾನವನ್ನು ಮಂಜೂರು ಮಾಡಬೇಕೆಂದು ತೆಕ್ಕಾರು ಗ್ರಾಮ ಪಂಚಾಯತ್ ಸದಸ್ಯ ರಜಾಕ್ ರವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here