








ಅಳದಂಗಡಿ: ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಂಶತಿ ಸಮಾರಂಭ ಭವ್ಯವಾಗಿ ನಡೆಯಿತು. ಸಮಾರಂಭಕ್ಕೆ ಅತಿಥಿಗಳಾಗಿ ಕಥೋಲಿಕ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸ್ವಾಮಿ ಡಾ. ಪ್ರವೀಣ್ ಲಿಯೋ ಲಸ್ರಾದೋ, ಶಾಲಾ ಸಂಚಾಲಕ ಹಾಗೂ ಫಾ. ಎಲಿಯಾಸ್ ಡಿಸೋಜರವರು, ಅಳದಂಗಡಿ ಅರಮನೆ ಡಾ. ಪದ್ಮ ಪ್ರಸಾದ್ ಅಜೀಲ, ಬೆಳ್ತಂಗಡಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಶಾಲಾ ಸಂಚಾಲಕರಾಗಿ ಸೇವೆ ಸಲ್ಲಿಸಿದ ಧರ್ಮಗುರು ಫಾ .ಅರುಣ್ ಲೋಬೋ, ಫಾ .ಅಬೆಲ್ ಲೋಬೋ, ಮಾಧ್ಯಮ ಲೋಕದ ಮಿಂಚಿನ ತಾರೆ ವಾಲ್ಟರ್ ನಂದಳಿಕೆ, ಡೈರೆಕ್ಟರ್ ಡೈಜಿ ವರ್ಲ್ಡ್ ಮೀಡಿಯಾ ಮಂಗಳೂರು. ಅಳದಂಗಡಿ ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಸರಸ್ವತಿ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಸ್ಟೀವನ್ ಮ್ಯಾಥ್ಯೂ, ಪಾಯ್ಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಲಿಯೋ ಪಿರೇರಾ, ಶಾಲಾ ಮುಖ್ಯ ಶಿಕ್ಷಕಿ ಮೋನಿಕಾ ಡಿಸೋಜ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಅಸ್ಮಿತ ಜೆಸ್ಲಿ ಡಿಸೋಜಾ, ಶಾಲಾ ನಾಯಕಿ ಅನ್ವಿಶಾ ಪಾಯ್ಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರಂಭಕ್ಕೆ ವಿಶೇಷ ಮೆರುಗು ನೀಡಿದವು.









