ಶಿಶಿಲ: ಹಳೆ ವಿದ್ಯಾರ್ಥಿಗಳು ಮತ್ತು ವಿದ್ಯಾಭಿಮಾನಿಗಳು ಕಟ್ಟಿಸಿದ ಸರಕಾರಿ ಶಾಲೆಯ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆ

0

ಶಿಶಿಲ: ಡಿ. 29ರಂದು ಹಳೆ ವಿದ್ಯಾರ್ಥಿಗಳು ಮತ್ತು ವಿದ್ಯಾಭಿಮಾನಿಗಳು ಕಟ್ಟಿಸಿದ ಸರಕಾರಿ ಶಾಲೆಯ ನೂತನ ಕಟ್ಟಡದ ಉದ್ಘಾಟನೆಯನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಡೆಸಲಿದ್ದು ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆಯನ್ನು ಶಿಶಿಲ ಗ್ರಾಮದ ಪ್ರಧಾನ ದೈವನರ್ತಕ ನಾರ್ಣ ನಲ್ಕೆ ಬಿಡುಗಡೆಗೊಳಿಸಿದರು.

ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಮೋಹನ್ ಗೌಡ, ಹಳೆವಿಧ್ಯಾರ್ಧಿ ಸಂಘದ ಅಧ್ಯಕ್ಷ ಕರುಣಾಕರ್ ಶಿಶಿಲ, ಶಿಶಿಲ ಪಂಚಾಯತ್ ಅಧ್ಯಕ್ಷ ಸುಧಿನ್ ಡಿ., ನಿಕಟಪೂರ್ವ ಅಧ್ಯಕ್ಷ ಸಂದೀಪ್ ಅಮ್ಮುಡಂಗೆ, ಕಟ್ಟಡ ಸಮಿತಿಯ ಸದಸ್ಯರಾದ ಭುವನ್ ಕುಮಾರ್, ಮನೋಜ್ ಪದ್ಮಯ್ಯ ಗೌಡ, ಸಿ.ಎ ಬ್ಯಾಂಕ್ ನಿರ್ದೆಶಕ ಕೊರಗಪ್ಪ ಗೌಡ ಪಡ್ಪು, ಹಳೆವಿದ್ಯಾರ್ಥಿಗಳಾದ ಹರೀಶ್, ಜಯಂತಿ, ಗಾಯತ್ರಿ, ವಸಂತಿ, ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here