








ಬೆಳ್ತಂಗಡಿ: ರೌಡಿಶೀಟರ್ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ 16-12-2025 ರಿಂದ 16-09-2026 ರವರೆಗೆ ( ಹತ್ತು ತಿಂಗಳ ಕಾಲ) ಪುತ್ತೂರು ಎ.ಸಿ. ಸ್ಟೆಲ್ಲಾ ವರ್ಗೀಸ್ ಎರಡನೇ ಭಾರಿಗೆ ಡಿ.16 ರಂದು ಗಡಿಪಾರು ಮಾಡಿದ ಪ್ರಕರಣ ಸಂಬಂಧ ತಿಮರೋಡಿ ಮಹೇಶ್ ಶೆಟ್ಟಿಯವರ ಉಜಿರೆಯಲ್ಲಿರುವ ಮನೆಗೆ ಡಿ.18ರಂದು ಸಂಜೆ 6 ಗಂಟೆಗೆ ಬೆಳ್ತಂಗಡಿ ಪೊಲೀಸರು ತೆರಳಿ ಮನೆಯ ಗೋಡೆಗೆ ಗಡಿಪಾರು ಆದೇಶದ ಪ್ರತಿಯನ್ನು ಅಂಟಿಸಿದ್ದಾರೆ. ಅಲ್ಲದೆ, ಉಜಿರೆಯ ಪೇಟೆಯಲ್ಲಿ ಮೈಕ್ ನಲ್ಲಿ ಪ್ರಕಟಣೆಯನ್ನು ಘೋಷಿಸಿದ್ದಾರೆ. ಸಾರ್ವಜನಿಕರ ಮುಂದೆ ಪ್ರಕಟಣೆ ಓದಿ ಹೇಳಿದ್ದಾರೆ.









