






ಬೆಳ್ತಂಗಡಿ: ವಿಶ್ವ ವಿಶೇಷ ಚೇತನರ ದಿನಾಚರಣೆಯ ಪ್ರಯುಕ್ತ ಕಣಿಯೂರು ಗ್ರಾಮ ಪಂಚಾಯತ್ 2025 – 26ನೇ ಸಾಲಿನ ವಿಶೇಷ ಚೇತನ ಸಮನ್ವಯ ಗ್ರಾಮ ಸಭೆಯನ್ನು ಡಿ.18ರಂದು ಬೆಳಿಗ್ಗೆ 10:30ಕ್ಕೆ ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷ ಸೀತಾರಾಮ ಮಡಿವಾಳ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಚಿರಂಜೀವಿ ಶೆಟ್ಟಿ ಅವರು 2024/25ನೇ ಸಾಲಿನ ವರದಿಯನ್ನು ಸಭೆಯ ಮುಂದೆ ಓದಿ ಹೇಳಿದರು. ತಾಲೂಕು ಪಂಚಾಯತ್ ನ ವಿವಿಧೋದ್ದೇಶ ಪುನರ್ ವಸತಿ ಸಂಯೋಜಕ ಜಾನ್ ಅವರು ವಿಶೇಷ ಚೇತನರಿಗೆ ಸರಕಾರದಿಂದ ಸಿಗುವ ಹಲವಾರು ಸೌಲಭ್ಯದ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿಯನ್ನು ವಿವರಿಸಿದರು. ಹಾಗೂ ಕೆಲವೊಂದು ವಿಶೇಷ ಚೇತನರ ಬೇಡಿಕೆಯನ್ನು ತಕ್ಷಣವೇ ಸ್ಪಂದಿಸುವಂತೆ ತಿಳಿಸಿದರು. ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೀತಾ ಆರ್. ಸಾಲಿಯಾನ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ ವಿಶೇಷ ಚೇತನರಿಗೆ ಪಂಚಾಯತ್ ನಲ್ಲಿ ಶೇಕಡ 5% ಅನುದಾನದ ಸಿಗಬೇಕಾದ ಸೌಲಭ್ಯವನ್ನು ತಮಗೆ ಒದಗಿಸುತ್ತೇನೆಂದು ಭರವಸೆ ನೀಡಿದರು.



ಹಾಗೂ ಪಂಚಾಯತ್ ಅಧ್ಯಕ್ಷ ಸೀತಾರಾಮ ಮಡಿವಾಳ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ವಿಶೇಷ ಚೇತನರ ಬಗ್ಗೆ ನನಗೆ ತುಂಬಾ ಕಾಳಜಿ ಇದೆ ಮತ್ತು ಅವರಿಗೆ ಪಂಚಾಯತ್ ಮೂಲಕ ಯಾವ ಸೌಲಭ್ಯ ಅಗತ್ಯ ಇದೆಯೋ ಅದನ್ನು ತಮಗೆ ಒದಗಿಸುತ್ತೇನೆ ಎಂದರು. ಹಾಗೂ ವಿಶೇಷ ಚೇತನನ ಬೇಡಿಕೆಗಳ ಅರ್ಜಿಯನ್ನು ಸಭೆಯಲ್ಲಿ ಸ್ವೀಕರಿಸಲಾಯಿತು. ಹಾಗೂ ನಾರಾಯಣ ಪೂಜಾರಿ ಉರುವಾಲು ಅವರಿಗೆ ಪಂಚಾಯಿತಿನ ಶೇಕಡ 5% ಅನುದಾನದಲ್ಲಿ ವಾಕರ್ ಅಧ್ಯಕ್ಷರ ಮೂಲಕ ನೀಡಲಾಯಿತು. ಮತ್ತು ಮಹಮದ್ ಲತೀಫ್ ಅವರಿಗೆ ವಾಟರ್ ಬೆಡ್ ನೀಡಲಾಯಿತು.
ಪಂಚಾಯತ್ ಕಾರ್ಯದರ್ಶಿ ರಮೇಶ್ ಕೆ., ತಾಲೂಕು ಪಂಚಾಯತ್ ವಿವಿಧೋದ್ದೇಶ ಪುನರ್ ವಸತಿ ಸಂಯೋಜಕ ಜಾನ್, ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಚಿರಂಜೀವಿ, ಗ್ರಾಮ ಪಂಚಾಯತ್ ಬೆಳಾಲು ಪುನರ್ ವಸತಿ ಕಾರ್ಯಕರ್ತ ಹೀರಣ್ಣ, ಉಜಿರೆ ಗ್ರಾಮ ಪಂಚಾಯತ್ ಪುನರ್ವಸತಿ ಕಾರ್ಯಕರ್ತ ವಿಪುಲ್ ಪೂಜಾರಿ, ಇಳಂತಿಲ ಗ್ರಾಮ್ ಪಂಚಾಯತ್ ಪುನರ್ವಸತಿ ಕಾರ್ಯಕರ್ತೆ ರಾಧಿಕಾ, ಕೊಯ್ಯೂರು ಗ್ರಾಮ ಪಂಚಾಯತ್ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಕೀರ್ತನ್, ಇಂದಬೆಟ್ಟು ಗ್ರಾಮ ಪಂಚಾಯತ್ ಗ್ರಾಮೀಣ ಪುನರ್ವವಸತಿ ಕಾರ್ಯಕರ್ತ ಜೋಸೆಫ್, ಗ್ರಂಥಾಲಯ ಮೇಲ್ವಿಚಾರಕಿ ರೇವತಿ, ಸಂಜೀವಿನಿ MBK ರತ್ನಾವತಿ, ವಿಶೇಷ ಚೇತನ ಬಂಧುಗಳು ಮತ್ತು ಅವರ ಪೋಷಕರು ಹಾಗೂ ಪಂಚಾಯತ್ ನ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪಂ. ಅಭಿವೃದ್ಧಿ ಅಧಿಕಾರಿ ಗೀತಾ ಆರ್. ಸಾಲಿಯಾನ್ ಅವರು ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು.









