






ಬೆಳ್ತಂಗಡಿ: ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ ಸುಸ್ಥಿರ ಪ್ರಮಾಣೀಕರಣ ಯೋಜನೆಯಡಿ ಬೆಳ್ತಂಗಡಿ ತಾಲೂಕಿನ ನಿಡ್ಲೆಯ ಬರಂಗಾಯದಲ್ಲಿರುವ ಅಗ್ರಿಲೀಫ್ ಎಕ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ZED ಬೆಳ್ಳಿ ಪ್ರಮಾಣಪತ್ರವನ್ನು ನೀಡಲಾಯಿತು.



ಅಗ್ರಿಲೀಫ್ ಸಂಸ್ಥೆ ಪ್ರತಿನಿಧಿಯಾಗಿ ಜಗನ್ನಾಥ್ ಅವರು ಮಂಗಳೂರಿನ ಕೈಗಾರಿಕಾ ನಿಗಮದಲ್ಲಿ ಪ್ರಮಾಣ ಪತ್ರ ಸ್ವೀಕರಿಸಿದರು. ಈ ಮೈಲಿಗಲ್ಲು ಸಾಧಿಸಲು ಕಾರಣಕರ್ತರಾದ ಅಗ್ರಿಲೀಫ್ ಸಿಬ್ಬಂದಿಯ ಸಮರ್ಪಣಾ ಭಾವ, ಬೆಂಬಲ ಮತ್ತು ಅಮೂಲ್ಯ ಕೊಡುಗೆಗಾಗಿ ಪ್ರಾಮಾಣಿಕ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಸಂಸ್ಥೆಯ ಸಿಇಒ ಮತ್ತು ಮುಖ್ಯಸ್ಥ ಅವಿನಾಶ್ ರಾವ್ ಹೇಳಿದ್ದಾರೆ.









