ಮಡಂತ್ಯಾರಿನಲ್ಲಿ ‘ಕ್ರಿಸ್ಮಸ್ ಬಂಧುತ್ವ ಉಡುಗೊರೆ’ ಕಾರ್ಯಕ್ರಮ

0

ಮಡಂತ್ಯಾರು: ಡಿ.14ರಂದು ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ ಮಡಂತ್ಯಾರು ಘಟಕದಿಂದ ಕ್ರಿಸ್ಮಸ್ ಬಂಧುತ್ವ ಉಡುಗೊರೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.. ಮುಖ್ಯ ಅಥಿತಿಗಳು ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸೇಕ್ರೆಡ್ ಹಾರ್ಟ್ ಚರ್ಚಿನ ಪ್ರಧಾನ ಧರ್ಮಗುರು ಸ್ವಾಮಿ ಸ್ಟ್ಯಾನಿ ಗೋವಿಯಸ್ ಅಧ್ಯಕ್ಷ ಸ್ಥಾನದಿಂದ ಮಾತನಾಡಿ “ಕ್ರಿಸ್ತ ಜಯಂತಿ ನಾವು ಡಿ.25ರಂದು ಆಚರಿಸುತ್ತೇವೆ. ದೇವರು ಬಡವರಾಗಿ ಮಾನವ ರೂಪ ತಾಳಿ ಈ ಧರೆಗೆ ಬಂದದ್ದು ನಮ್ಮನ್ನು ಶ್ರೀಮಂತಗೊಳಿಸಲು. ದೇವರು 2025 ವರ್ಷದ ಹಿಂದೆ ಕಿಸ್ತನ ಜನನದ ಸಂದೇಶ ಸಾರಲು ಕುರುಬರನ್ನು ಮತ್ತು ನಕ್ಷತ್ರವನ್ನು ಮಾಧ್ಯಮವಾಗಿ ಉಪಯೋಗಿಸಿದರು ಕ್ರಿಸ್ಮಸ್ ಸರ್ವರ ಹಬ್ಬ, ಎಲ್ಲರೂ ಸಂತೋಷ ಪಡಬೇಕು” ಎಂದು ಹೇಳಿದರು.

ಮುಖ್ಯ ಅಥಿತಿಯಾಗಿ ಆಗಮಿಸಿದ ಮಾಲಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ಮಾತನಾಡಿ ಮದರ್ ತೆರೆಜಾರವರು ಮಾನವ ಸೇವೆಯ ಮುಖಾಂತರ ದೇವರ ಸೇವೆ ಮಾಡಿದರು. ಡಿ. 25 ದೇವ ಮಾನವ ಹುಟ್ಟಿದ ದಿನ. ಜನನ-ಮರಣ ಅದರ ಮಧ್ಯೆ ಜೀವನ. ನಮ್ಮಲ್ಲಿ ಒಂದೇ ಜಾತಿ, ಒಂದೆ ಮತ, ಒಂದೇ ದೇವರು ಈ ಕಲ್ಪನೆ ಇರಬೇಕು. ನಾವು ಸಮಾಜದ ಸಾಮರಸ್ಯವನ್ನು ಹಾಳು ಮಾಡಬಾರದು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲ್ಪಟ್ಟಿದೆ, ತುಂಬಾ ಸಂತೋಷವಾಗುತ್ತದೆ ಎಂದು ಹೇಳಿದರು.

ಮಾಲಾಡಿ ಯುನೈಟೆಡ್ ಫ್ರೆಂಡ್ಸ್ ನ ಅಧ್ಯಕ್ಷ ಮಹಮ್ಮದ್ ಆಲಿ ಮಾತನಾಡಿ ಕ್ರಿಸ್ಮಸ್ ಕೇವಲ ಕ್ರಿಸ್ತರ ಹಬ್ಬ ಅಲ್ಲ, ಎಲ್ಲರ ಹಬ್ಬ. ಇದೊಂದು ಸುಂದರವಾದ ಕಾರ್ಯಕ್ರಮ. ಲೋಕದಲ್ಲಿ ಶಾಂತಿ ಸೌಹಾರ್ದತೆ ಮಾತ್ರವಲ್ಲ ‘ ಬಂಧುತ್ವ’ ಸಹ ಮುಖ್ಯವಾಗಿರಬೇಕು. ಒಬ್ಬರು ಇನ್ನೊಬ್ಬರ ಸಹಾಯಕ್ಕೆ ಹೋಗುವುದು. ಈ ರೀತಿ ಶುಭ ಸಂದೇಶವನ್ನು ಮುಂದುವರೆಸಲು ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಮೈಸೂರು ಜಿ. ಕೆ. ಟಯರ್ಸ್ ನ ಮಾಜಿ ಮ್ಯಾನೇಜರ್ ಕ್ಲಿಫರ್ಡ್ ಜೇಮ್ಸ್ ಡಿಸೋಜಾ ಮಾತನಾಡಿ ಕ್ರಿಸ್ಮಸ್ ಹಬ್ಬದ ಮುಖ್ಯ ಉದ್ದೇಶ ಶೇರಿಂಗ್ ಮತ್ತು ಕೇರಿಂಗ್. ಕೆಳಗಿನ ಸ್ತರದಲ್ಲಿರುವ ಜನರ ಕಾಳಜಿ ವಹಿಸಿ ನಮ್ಮಲ್ಲಿರುವುದನ್ನು ಅವರಲ್ಲಿ ಹಂಚಬೇಕು ಎಂದು ಹೇಳಿದರು.

ಇನ್ನೊರ್ವ ಅತಿಥಿ ಕ. ಸಭಾ ಮಂಗ್ಳುರ್ ಪ್ರದೇಶ್ ನ ಉಪಾಧ್ಯಕ್ಷ ಲಿಯೋ ರಾಡ್ರಿಗಸ್ ಮಾತನಾಡಿ ಇಂದು ಸಮಾಜದಲ್ಲಿ ಬಂಧುತ್ವ, ಸಾಮರಸ್ಯದ ಬದುಕು ಅಗತ್ಯವಾಗಿದೆ ಎಂದು ಹೇಳಿದರು.

ಬಂದ ಸರ್ವ ಧರ್ಮಿಯರಿಗೆ ಕ್ರಿಸ್ಮಸ್ ಉಡುಗೊರೆ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಸ್ವಾಮಿ ಸ್ಟ್ಯಾನಿ ಗೋವಿಯಸ್, ಪದ್ಮನಾಭ ಸಾಲಿಯಾನ್, ಮಹಮ್ಮದ್ ಆಲಿ, ಕ್ಲಿಫರ್ಡ್ ಜೇಮ್ಸ್ ಡಿಸೋಜಾ, ಲಿಯೋ ರೊಡ್ರಿಗಸ್, ವಿನ್ಸೆಂಟ್ ಡಿಸೋಜಾ, ಜೆರಾಲ್ಡ್ ಮೊರಾಸ್, ಸೆಲೆಸ್ತಿನ್ ಡಿಸೋಜಾ ಉಪಸ್ಥಿತರಿದ್ದರು. ವಿನ್ಸೆಂಟ್ ಡಿಸೋಜಾ ಸರ್ವರನ್ನು ಸ್ವಾಗತಿಸಿದರು. ವಿನ್ಸೆಂಟ್ ಮೊರಾಸ್ ಕಾರ್ಯಕ್ರಮದ ನಿರ್ವಹಣೆ ಮಾಡಿದರು. ರಿಚಾರ್ಡ್ ಮೊರಾಸ್ ವಂದಿಸಿದರು.

LEAVE A REPLY

Please enter your comment!
Please enter your name here