



ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ವಾರ್ಷಿಕ ಕ್ರೀಡೋತ್ಸವವು ನಡೆಯಿತು. ಮುಖ್ಯ ಅತಿಥಿಯಾಗಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲರು ವಿಶ್ವನಾಥ್ ಪಿ., ಬೆಳ್ತಂಗಡಿ ಶಿಕ್ಷಣ ಇಲಾಖೆ, ದೈಹಿಕ ಶಿಕ್ಷಣ ಪರಿವೀಕ್ಷಕಿ ಸುಜಯ ಬಿ., ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ರಮೇಶ್ ಎಚ್., ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕ್ರೀಡಾ ವಿಭಾಗ, ಆಧ್ಯಾತ್ಮಿಕ ಜೀವನ ತರಬೇತುದಾರೆ ರೇಷ್ಮಾ ರಾಜಿತ್, ಮುಖ್ಯ ಶಿಕ್ಷಕಿ ಹೇಮಲತಾ ಎಂ. ಆರ್., ದೈಹಿಕ ಶಿಕ್ಷಕ ಪ್ರವೀಣ್ ಎನ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಮಕ್ಕಳಿಂದ ಪಥ ಸಂಚಲನವು ನಡೆಯಿತು. ಆಯ್ಕೆಯಾದ ತಂಡವು ಪಶಸ್ತಿಯನ್ನು ಪಡೆದುಕೊಂಡಿತು. ತೀರ್ಪುಗಾರರಾಗಿ ಉಜಿರೆ ಎಸ್.ಡಿ.ಎಮ್ ರಾಜ್ಯ ಪಠ್ಯಕ್ರಮ ಸಹ ಶಿಕ್ಷಕ ವಿವೇಕ್, ಧರ್ಮಸ್ಥಳ ಎಸ್.ಡಿ.ಎಂ ಸಹ ಶಿಕ್ಷಕಿ ಗೀತಾ ಆಗಮಿಸಿದ್ದರು. ಕ್ರೀಡಾ ಜ್ಯೋತಿಯನ್ನು ಉದ್ಧಾಟಿಸಿದ ವಿಶ್ವನಾಥ್ ಪಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿ ಕ್ರೀಡೆಯು ನಿಂತ ನೀರಾಗದೆ ಹರಿವ ನದಿಯಾಗಬೇಕು ಒಳ್ಳೆಯ ಆಟಗಾರರನ್ನು ಸಮಾಜಕ್ಕೆ ಪರಿಚಯಿಸುವುದು ನಮ್ಮ ಸಂಸ್ಥೆಯ ಉದ್ದೇಶ ಎಂಬುದನ್ನು ತಿಳಿಸಿದರು.
ಕ್ರೀಡಾ ದ್ವಜವನ್ನು ಅರಳಿಸಿದ ಸುಜಯ ಬಿ. ಮಕ್ಕಳಿಗೆ ಶುಭವನ್ನು ಹಾರೈಸಿದರು. ಎಸ್. ಡಿ. ಎಂ ಶಿಕ್ಷಣ ಸಂಸ್ಥೆಗಳ ಎಲ್ಲಾ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು. ಅಲ್ಲದೆ ಎಸ್. ಡಿ. ಎಂ ಹಾಸ್ಪಿಟಲ್ ನ ಆರೋಗ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ಪ್ರವೀಣ್ ಎನ್. ನೇತ್ರತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹ ಶಿಕ್ಷಕಿ ಮೇನಿತಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ, ಸಹ ಶಿಕ್ಷಕ ಮುರಳಿ ಪಿ. ಸ್ವಾಗತಿಸಿ, ನಿರೂಪಿಸಿದರು.









