



ಉಜಿರೆ: ಶ್ರೀ.ಧ.ಮಂ. ವಸತಿ ಪದವಿ ಪೂರ್ವ ಕಾಲೇಜಿನ ಇಕೋ ಕ್ಲಬ್ ನ ಅಡಿಯಲ್ಲಿ ವಿದ್ಯಾರ್ಥಿಗಳನ್ನು ‘ಕ್ಷೇತ್ರ ಪರಿವೀಕ್ಷಣೆಗೆ ಮಂಗಳೂರಿನ ಪಿಲಿಕುಳದ ವಿಜ್ಞಾನ ಕೇಂದ್ರಕ್ಕೆ ಕರೆದೊಯ್ಯಲಾಯಿತು.
ವಿದ್ಯಾರ್ಥಿಗಳು ತಾರಾಲಯದಲ್ಲಿ ತೋರಿಸಲಾಗುವ ಸೌರವ್ಯೂಹದ ಸಾಕ್ಷ್ಯ ಚಿತ್ರವನ್ನು ಕುತೂಹಲದಿಂದ ವೀಕ್ಷಿಸಿದರು. ನಂತರ ನಿಸರ್ಗಧಾಮವನ್ನು ಪರಿವೀಕ್ಷಣೆ ಮಾಡಿ ಪಿಲಿಕುಳದ ಬಳಿ ಇರುವ ಮೃಗಾಲಯಕ್ಕೆ ಭೇಟಿ, ಕಟೀಲು ಕ್ಷೇತ್ರ ಹಾಗೂ ಕೊಡ್ಯಡ್ಕ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಕಾರ್ಯಕ್ರಮದ ಸಂಪೂರ್ಣ ಲಾಭವನ್ನು ವಿದ್ಯಾರ್ಥಿಗಳು ಪಡೆದು ಸಂಭ್ರಮಿಸಿದರು. ಕಾಲೇಜಿನ ಇಕೋ ಕ್ಲಬ್ ನ ಸಂಯೋಜಕ, ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ವಾಣಿ ಎಂ.ಎಂ. ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ನಿರ್ವಹಿಸಿದರು.


ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಜೊತೆಗಿದ್ದು ಅಗತ್ಯ ಮಾಹಿತಿಗಳನ್ನು ನೀಡಿದರು. ಹಾಗೂ ಕಾಲೇಜಿನ ಬೋಧಕ ಸಿಬ್ಬಂದಿಗಳು ಜೊತೆಗಿದ್ದು ಸಹಕರಿಸಿದರು.









