





ಪುದುವೆಟ್ಟು: 25ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ದೀಪದೋತ್ಸವ ಕಾರ್ಯಕ್ರಮ ಡಿ. 13ರಂದು ವಾಸು ಗುರುಸ್ವಾಮಿ ಪಿಲಿಕಳ ಹಾಗೂ ಶಶಿ ಗುರುಸ್ವಾಮಿ ಕಾರಂಬಾರು ಅವರ ನೇತೃತ್ವದಲ್ಲಿ ಶ್ರೀ ನಾರಾಯಣ ಗುರು ಸಂಘ ವಠಾರದಲ್ಲಿ ನಡೆಯಲಿದೆ. ಧರ್ಮಸ್ಥಳ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು SNDP ಪುದುವೆಟ್ಟು ಮಿಯ್ಯಾರು ಅಧ್ಯಕ್ಷ ಸುರೇಶ್ ಪುದುವೆಟ್ಟು ವಹಿಸಲಿದ್ದಾರೆ. ರಾತ್ರಿ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನಾ ಮೆರವಣಿಗೆ ಹಾಗೂ ಕಮ್ಮಟೋತ್ಸವ ನಂತರ ಯೋಗ ಡಾನ್ಸ್ ನಡೆಯಲಿದೆ.









