ನಾಳ: ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಾಲೋಚನೆ ಸಭೆ

0

ನಾಳ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ 2027ರ ಪ್ರಥಮ ತಿಂಗಳಲ್ಲಿ ನಡೆಸಲು ಉದ್ದೇಶಿತ ಅಷ್ಟಬಂಧ ಬ್ರಹ್ಮ ಕಲಶೋತ್ಸವದ ಬಗ್ಗೆ ಭಕ್ತಾದಿಗಳ ಮತ್ತು ಸಾರ್ವಜನಿಕ ಸಭೆ ಡಿ.3ರಂದು ನಾಳ ದೇವಸ್ಥಾನದ ಅನ್ನಛತ್ರದಲ್ಲಿ ನಡೆಯಿತು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಬಿ. ಅಧ್ಯಕ್ಷತೆ ವಹಿಸಿದರು. 2025ನೇ ಸಾಲಿನ ಹಾಗೂ ನೂತನ ವ್ಯವಸ್ಥಾಪನಾ ಸಮಿತಿಯ ಖರ್ಚು ವೆಚ್ಚಗಳ ಲೆಕ್ಕ ಪತ್ರ ಮಂಡನೆಯನ್ನು ದೇವಸ್ಥಾನದ ಪ್ರಬಂಧಕ ಗಿರೀಶ್ ಶೆಟ್ಟಿ ಮಂಡಿಸಿದರು.

ಕಳೆದ ಹತ್ತು ತಿಂಗಳಲ್ಲಿ ಭಕ್ತರ ಹಿರಿಯರ ಹಾಗೂ ಸಾರ್ವಜನಿಕರ ಸಭೆ ಕರೆಯದೇ ಸುಮಾರು ರೂಪಾಯಿ 10 ಲಕ್ಷಕ್ಕೂ ಹೆಚ್ಚಿನ ವೆಚ್ಚದಲ್ಲಿ ಕಾಮಗಾರಿ ನಡೆದಿದೆ.

ಸುಮಾರು ಒಂಬೈನ್ನೂರು ವರ್ಷಕ್ಕಿಂತ ಹೆಚ್ಚು ಇತಿಹಾಸವಿರುವ ಪ್ರಸಿದ್ಧ ದೇವಸ್ಥಾನಕ್ಕೆ ಸಂಬಂಧಿಸಿದ ನ್ಯಾಯತರ್ಪು, ಕಳಿಯ ಮತ್ತು ಓಡಿಲ್ನಾಳ ಗ್ರಾಮಸ್ಥರು ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಹಿಸಿದ್ದಾರೆ.

ಇಂತಹ ಸಂದರ್ಭದಲ್ಲಿ ಭಕ್ತರ ಅಭಿಪ್ರಾಯ ಕಡೆಗಣಿಸಿ ಕೆಲವೊಂದು ಸಂದರ್ಭಗಳಲ್ಲಿ ಅನಗತ್ಯ ಕಾಮಗಾರಿ ಕೈಗೊಂಡಿರುವ ಬಗ್ಗೆ ಭಕ್ತರು ಅಸಮಾಧಾನ ವ್ಯಕ್ತಪಡಿಸಿದರು. ಅಷ್ಟಬಂಧ ಬ್ರಹ್ಮಕಲಶೋತ್ಸವ ಪೂರ್ವ ತಯಾರಿ ನಡೆಸುವುದು ಸುಲಭದ ಕೆಲಸವಲ್ಲ. ಹಿರಿಯರ, ಭಕ್ತರ ಹಾಗೂ ಸಾರ್ವಜನಿಕರ ಸಲಹೆ, ಸೂಚನೆ ಸಹಕಾರದಿಂದ ಮಾತ್ರ ಸಾಧ್ಯ.

ಈ ಹಿಂದೆ ಎರಡು ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಯದಲ್ಲಿ ವಿವಿಧ ಸಂಘ, ಸಂಸ್ಥೆಯ ದಾನಿಗಳ ಸಹಕಾರದಿಂದ ಸಾಧ್ಯವಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ, ಕಳಿಯ ಕೃಷಿ ಸಿ.ಎ. ಬ್ಯಾಂಕ್ ಅಧ್ಯಕ್ಷ ವಸಂತ ಮಜಲು ಸಲಹೆ, ಸೂಚನೆಗಳನ್ನು ನೀಡಿದರು.

ನಾಳ ದೇವಸ್ಥಾನದ ಸಮಿತಿಯ ನಿರ್ಣಯದಂತೆ ಈ ಹಿಂದೆ ಮಳೆಗಾಲ ಸಮಯದಲ್ಲಿ ದೇವಸ್ಥಾನದ ವ್ಯಾಪ್ತಿಯಲ್ಲಿ ಚಿಕ್ಕ ಮೇಳವೂ ಮನೆ, ಮನೆಗೆ ಭೇಟಿ ನೀಡಿ ಸಂಗ್ರಹಿಸುವ ಆದಾಯದ ಸ್ವಲ್ಪ ಭಾಗವನ್ನು ದೇವಸ್ಥಾನದ ಸಮಿತಿಗೆ ನೀಡಬೇಕು ಎಂದು ಸಮಿತಿಯವರು ಹೇಳಿದರು. ಅದರಂತೆಯೇ ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿ ಸದಸ್ಯ ರಾಘವ ಹೆಚ್.ಅವರಿಗೆ ವಹಿಸಿದರು.

ಕಳೆದ ಹತ್ತಾರು ವರ್ಷಗಳಿಂದ ಚಿಕ್ಕ ಮೇಳವೂ ಸಮಿತಿಗೆ ಹಣ ಸಂದಾಯ ಮಾಡದೇ ಸಾವಿರಾರು ರೂಪಾಯಿ ಬಾಕಿ ಉಳಿಸಿಕೊಂಡಿದ್ದಾರೆ. ಅದುದರಿಂದ ಚಿಕ್ಕ ಮೇಳವನ್ನು ಸ್ಥಗಿತಗೊಳಿಸಬೇಕು ಎಂದು ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಭುವನೇಶ್ ಜಿ., ಮಾಜಿ ಹಿರಿಯ ಸದಸ್ಯರಾದ ಜನಾರ್ದನ ಪೂಜಾರಿ ಗೇರುಕಟ್ಟೆ, ಅನಂದ ಶೆಟ್ಟಿ ಐಸಿರಿ,
ವಿವಿಧ ಸಮಿತಿ ಪದಾಧಿಕಾರಿಗಳು ಮತ್ತು ಭಕ್ತರು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿ ಒತ್ತಾಯಿಸಿದರು.

ಎಲ್ಲರ ಒತ್ತಾಯಕ್ಕೆ ಮಣಿದ ನಾಳದ ಚಿಕ್ಕ ಮೇಳ ತಿರುಗಾಟವನ್ನು ನಿಲ್ಲಿಸಲು ಸಭೆಯಲ್ಲಿ ನಿರ್ಣಯ ಕೈಗೊಂಡರು. ಇನ್ನೂ ಕೆಲವೊಂದು ವಿಷಯಗಳ ಬಗ್ಗೆ ಹೆಚ್ಚಿನ ಸಲಹೆ, ಸೂಚನೆಗಳನ್ನು ಮುಂದಿನ ವಾರ ಸಭೆಯಲ್ಲಿ ತೀರ್ಮಾನಿಸುವುದು ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಭೆಯಲ್ಲಿ ತಿಳಿಸಿದರು.

ದೇವಸ್ಥಾನದ ಹಣಕಾಸು ವ್ಯವಹಾರದಲ್ಲಿ ದುರುಪಯೋಗ ಮಾಡಿಕೊಂಡಿರುವ ರಾಘವ ಹೆಚ್. ಅವರನ್ನು ದೇವಸ್ಥಾನದ ಸಮಿತಿಯ ಯಾವುದೇ ವಿಭಾಗದಲ್ಲಿ ಸೇರಿಸಿಕೊಳ್ಳಬಾರದು ಎಂದು ವ್ಯವಸ್ಥಾಪನಾ ಸಮಿತಿ ಸದಸ್ಯ ಹೇಮಂತ ಕುಮಾರ್ ತಿಳಿಸಿದರು.

ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ. ರಾಘವೇಂದ್ರ ಅಸ್ರಣ್ಣರು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಹೇಮಂತ್ ಕುಮಾರ್, ಶರತ್ ಕುಮಾರ್ ಶೆಟ್ಟಿ, ಹರೀಶ್ ಕೆ., ನೀನಾ ಕುಮಾರ್, ಅರುಣ್ ಶೆಟ್ಟಿ, ರೀತಾ,ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಯಂ., ಭಜನಾ ಮಂಡಳಿ ಅಧ್ಯಕ್ಷ ಗಣೇಶ್ ನಾಳ ಮತ್ತು ಮಾತೃ ಮಂಡಳಿ ಅಧ್ಯಕ್ಷೆ ಮಮತ ವಿ.ಆಳ್ವ ವಿವಿಧ ಸಮಿತಿ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here