




ಮುಂಡೂರು: ಶ್ರೀ ನಾಗಾಂಬಿಕಾ ದೇವಸ್ಥಾನ, ಶ್ರೀ ನಾಗಕಲ್ಲುರ್ಟಿ ದೈವಸ್ಥಾನ ಶ್ರೀ ಕ್ಷೇತ್ರ ಮಂಗಳಗಿರಿ, ಮುಂಡೂರು ಶ್ರೀ ನಾಗಾಂಬಿಕ ಭಜನಾ ಮಂಡಳಿ ಶ್ರೀ ಕ್ಷೇತ್ರ ಮಂಗಳಗಿರಿ ಹಾಗೂ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್, ಗುರುವಾಯನಕೆರೆ ಇದರ ಸಹಯೋಗದೊಂದಿಗೆ ಡಿ.14ರಂದು ರಾತ್ರಿ ಗಂಟೆ 7ರಿಂದ 8ರವರೆಗೆ ಮುಂಡೂರು ಮಂಗಳಗಿರಿ ಶ್ರೀ ಕ್ಷೇತ್ರದ ವಠಾರದಲ್ಲಿ ಬೆಳ್ತಂಗಡಿ ತಾಲೂಕಿನ ವಿವಿಧ ಭಜನಾ ಮಂಡಳಿಗಳ ಭಜಕರಿಂದ ಏಕಕಾಲದಲ್ಲಿ ಮಂಗಳಗಿರಿ ಭಜನೋತ್ಸವ 2025 ಕುಣಿತ ಭಜನಾ ಕಾರ್ಯಕ್ರಮ ನಡೆಯಲಿದೆ. ಎಂದು ಶ್ರೀ ಕ್ಷೇತ್ರ ಮಂಗಳಗಿರಿಯ ಆಡಳಿತ ಮೊಕ್ತೇಸರ ರಾಜೀವ ತಿಳಿಸಿದ್ದಾರೆ.


ಶ್ರೀ ನಾಗಾಂಬಿಕ ಭಜನಾ ಮಂಡಳಿ ಸದಸ್ಯರಿಂದ ಹಾಗೂ ಪೋಷಕರಿಂದ ದಿನಕ್ಕೆ ಒಬ್ಬರ ನೇತೃತ್ವದಲ್ಲಿ 48 ದಿನಗಳ ಭಜನಾ ಕಾರ್ಯಕ್ರಮವು ನಡೆಯುತ್ತಿದ್ದು. ಡಿ. 11ರಂದು ಭಜನೆಯ ಮಂಗಳೋತ್ಸವ ಕುಣಿತ ಭಜನಾ ಕಾರ್ಯಕ್ರಮ ಹಾಗೂ ರಂಗ ಪೂಜೆ ಸೇವೆ ನಡೆಯಲಿದೆ.









