






ಮುಂಡಾಜೆ: ಬೆಳ್ತಂಗಡಿ ಎಸ್.ಡಿ.ಎಂ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ನ.29ರಂದು ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ದೇಶಭಕ್ತಿ ಗೀತೆಯಲ್ಲಿ ಸಿದ್ದಬೈಲು ಪರಾರಿ ಶಾಲೆಯ ವಿದ್ಯಾರ್ಥಿನಿ ಇಷ್ಟ ಅವರು ದ್ವಿತೀಯ ಸ್ಥಾನ ಗಳಿಸಿದ್ದಾರೆ. ನೀನಾದ ಕ್ಲಾಸಿಕಲ್ ಶ್ರೀದೇವಿ ಸಚಿನ್ ರವರ ಶಿಷ್ಯೆ. ಶಾರದಾ ಮತ್ತು ಶ್ರೀ ಕೃಷ್ಣ ದಂಪತಿಗಳ ಪುತ್ರಿ.









