




ಬೆಳ್ತಂಗಡಿ: ಚಂಡಮಾರುತದ ಪ್ರಭಾವದಿಂದಾಗಿ ಜಿಲ್ಲೆಯ ವಿವಿಧೆಡೆ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದ್ದು, ತೆಕ್ಕಾರು ಗ್ರಾಮದ ಬಾಜಾರು ಮನೆಯೊಂದಕ್ಕೆ ಸಿಡಿಲು ಬಡಿದ ಘಟನೆ ಡಿ.4 ರಂದು ನಡೆದಿರುತ್ತದೆ.



ತೆಕ್ಕಾರು ಗ್ರಾಮದ ಬಾಜಾರು ಕಕ್ಕಿಜಮ್ಮ, ಇಸುಬುರವರ ಮನೆಯಾಗಿದ್ದು, ಸಿಡಿಲು ಬಡಿದ ಪರಿಣಾಮ ಮನೆಯ ಗೋಡೆ, ಬಾಗಿಲು, ಟೈಲ್ಸ್, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಮನೆಯೊಳಗೆ ಇದ್ದ ವಸ್ತುಗಳಿಗೆ ಸಂಪೂರ್ಣ ಹಾನಿಯಾಗಿದ್ದು ಸುಮಾರು ರೂ.2 ಲಕ್ಷ ನಷ್ಟ ಆಗಿರುತ್ತದೆ ಎಂದು ಮನೆಯವರು ತಿಳಿಸಿರುತ್ತಾರೆ.

ಸ್ಥಳಕ್ಕೆ ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಬ್ದುಲ್ ರಝಾಕ್ ಹಾಗೂ ಗ್ರಾಮ ಆಡಳಿತಾಧಿಕಾರಿ ಸಾಕಮ್ಮ ಭೇಟಿ ನೀಡಿದ್ದಾರೆ.









