




ಅಂಡಿಂಜೆ: ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರತಿ ವರ್ಷ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕಾಗಿ ಏರ್ಪಡಿಸುವ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಅಂಡಿಂಜೆ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಕ್ಲಸ್ಟರ್ ಹಂತದಲ್ಲಿ ಭಾಗವಹಿಸಿ ಹಿರಿಯರ ಮತ್ತು ಕಿರಿಯರ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಗಳಿಸಿದ್ದು, 19 ವಿದ್ಯಾರ್ಥಿಗಳು ತಾಲೂಕು ಮಟ್ಟದ ಸ್ಪರ್ಧೆಗೆ ಅರ್ಹತೆಯನ್ನು ಪಡೆದಿದ್ದರು. ಹಾಗೂ ಪ್ರೌಢ ವಿಭಾಗದ ವಲಯ ಮಟ್ಟದ ಸ್ಪರ್ಧೆಯಲ್ಲಿ ಎಂಟನೇ ತರಗತಿಯ ಪ್ರಜ್ಞಾ ಕನ್ನಡ ಪ್ರಬಂಧ ಹಾಗೂ ಶ್ರೀಪ್ರದಾ ಕೆ. ಕನ್ನಡ ಭಾಷಣದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕಿಗೆ ಅರ್ಹತೆಯನ್ನು ಪಡೆದಿದ್ದರು.


ನ. 29ರಂದು ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ 21 ವಿದ್ಯಾರ್ಥಿಗಳು ಅದ್ಭುತ ಪೂರ್ವವಾಗಿ ಸ್ಪರ್ಧಿಸಿ 9 ಬಹುಮಾನವನ್ನು ಪಡೆದಿರುತ್ತಾರೆ.
ಹಾಶಿಕ್- ಕ್ಲೇ ಮಾಡಲಿಂಗ್ (ಹಿರಿಯ)- ಪ್ರಥಮ
ಅನುಷಾ- ಕನ್ನಡ ಕಂಠಪಾಠ (ಹಿರಿಯ )-ಪ್ರಥಮ
ಖುಷಿ -ಅಭಿನಯ ಗೀತೆ (ಹಿರಿಯ )-ಪ್ರಥಮ
ಪ್ರಥಮ್ -ಮಿಮಿಕ್ರಿ (ಹಿರಿಯ )-ದ್ವಿತೀಯ
ಸೌಮ್ಯ ಕನ್ನಡ ಪ್ರಬಂಧ (ಹಿರಿಯ )-ದ್ವಿತೀಯ
ಶಾರ್ವಿತ್ ಚಿತ್ರಕಲೆ( ಕಿರಿಯ)- ದ್ವಿತೀಯ
ಪ್ರಜ್ಞ ಕನ್ನಡ ಪ್ರಬಂಧ (ಪ್ರೌಢ)- ದ್ವಿತೀಯ
ರಶ್ಮಿ ಲತಾ ಆಶುಭಾಷಣ (ಹಿರಿಯ )-ತೃತೀಯ
ದೃತೀಕ್ಷ ಇಂಗ್ಲಿಷ್ ಕಂಠ ಪಾಠ (ಕಿರಿಯ )-ತೃತೀಯ ಸ್ಥಾನ ಪಡೆಯುವುದರೊಂದಿಗೆ ತಾಲೂಕಿನಲ್ಲಿ ಅತಿ ಹೆಚ್ಚು ಬಹುಮಾನವನ್ನು ಪಡೆದ ಶಾಲೆ ಎಂಬ ಕೀರ್ತಿಗೆ ಪಾತ್ರವಾಗಿದೆ. ಭಾಗವಹಿಸಿದ ಹಾಗೂ ವಿಜೇತ ವಿದ್ಯಾರ್ಥಿಗಳಿಗೆ ಶುಭವನ್ನು ಕೋರುವ ಅಂಡಿಂಜೆ ಸ. ಉ. ಪ್ರಾ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿ ವೃಂದ, ಶಾಲಾ SDMC ಅಧ್ಯಕ್ಷರು, ಸರ್ವ ಸದಸ್ಯರು
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು.









