




ಬೆಳಾಲು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳಾಲು ಒಕ್ಕೂಟದ ಪದಾಧಿಕಾರಿಗಳು ನವ ಜೀವನ ಸಮಿತಿಯ ಪದಾಧಿಕಾರಿಗಳು ಹಾಗೂ ವಲಯ ಮೇಲ್ವಿಚಾರಕರು ಮತ್ತು ಸೇವಾ ಪ್ರತಿನಿಧಿಗಳು ಡಿ.2ರಂದು ಅಸೌಖ್ಯದಿಂದ ಇರುವ ಬೆಳಾಲು ಮಂಜುನಾಥೇಶ್ವರ ನವ ಜೀವನ ಸಮಿತಿ ಸಕ್ರಿಯ ಸದಸ್ಯ, ಮಾಯ ಮಹೇಶ್ವರ ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಬರೆಮೇಲು ಕುಂಭ ಗೌಡ ಬರೆಮೇಲು ಮನೆಗೆ ಭೇಟಿ ನೀಡಿ ಆರ್ಥಿಕ ಧನ ಸಹಾಯ ಹಸ್ತಾಂತರಿಸಲಾಯಿತು.


ಉಜಿರೆ ವಲಯ ಮೇಲ್ವಿಚಾರಕಿ ಪೂರ್ಣಿಮಾ ಮಂಜುನಾಥೇಶ್ವರ ನವ ಜೀವನ ಸಮಿತಿಯ ಅಧ್ಯಕ್ಷ ಸೂರಪ್ಪ ಗೌಡ, ಮಾಯ ಒಕ್ಕೂಟದ ಅಧ್ಯಕ್ಷ ಗಂಗಾಧರ ಸಾಲಿಯನ್, ಬೆಳಾಲು ಒಕ್ಕೂಟದ ಅಧ್ಯಕ್ಷ ರತ್ನಾಕರ ಆಚಾರ್ಯ, ಒಕ್ಕೂಟದ ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು, ಎಲ್ಲಾ ನವ ಜೀವನ ಸಮಿತಿಯ ಸದಸ್ಯರು ಹಾಗೂ ಮನೆಯವರು ಉಪಸ್ಥಿತರಿದ್ದರು.









