ಉಡುಪಿ ಲಕ್ಷಕಂಠ ಗೀತಾ ಭಜನೋತ್ಸಕ್ಕೆ ಬೆಳ್ತಂಗಡಿ ಭಜನಾ ತಂಡ- ಭಜನೆಯಿಂದ ಭಗವಂತನನ್ನು ಕಾಣಬಹುದು:ವೀರುಶೆಟ್ಟಿ

0

ಬೆಳ್ತಂಗಡಿ: ಭಜನೆ ಭಗವಂತನ್ನು ಒಲಿಸುವ ಸುಲಭದ ಸಾದನವಾಗಿದ್ದು ಇಂದು ಮಕ್ಕಳು ಶಾಲೆ ಹೊಗುವ ಮೊದಲೇ ಭಜನೆಯನ್ನು ಕರಗತಮಾಡಿಕೊಂಡಿದ್ದಾರೆ ಎಂದರೆ ಇದಕ್ಕೆ ಕಳೆದ 27 ವರ್ಷಗಳಿಂದ ಶ್ರಿ ಕ್ಷೇತ್ರ ಧರ್ಮಸ್ಥಳದ ಧರ್ಮಾದಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಧ.ಮಂ. ಭಜನಾ ಪರಿಷತ್ ಮೂಲಕ ನಡೆಸುತ್ತಿರುವ ಭಜನಾ ಕಮ್ಮಟವೇ ಪ್ರೇರಣೆ. ಭಜನೆಯಿಂದ ದೇವರನ್ನು ಕಾಣುವ ಜೊತೆಗೆ ಮನೆ ಮನೆಗಳಲ್ಲಿ ಸಂಸ್ಕಾರವನ್ನು ಬೆಳೆಸಲು ಸಾದ್ಯ ಎಂದು ಶ್ರೀ ಧ.ಮಂ. ಭಜನಾ ಪರಿಷತ್ ನ ಕಾರ್ಯದರ್ಶಿ ವೀರು ಶೆಟ್ಟಿ ಹೇಳಿದರು. ಅವರು ನ.30ರಂದು ಗುರುವಾಯನಕೆರೆ ನವಶಕ್ತಿ ಕ್ರೀಡಾಂಗಣದಲ್ಲಿ ಪರ್ಯಾಯ ಶ್ರಿ ಪುತ್ತಿಗೆ ಶ್ರೀ ಕ್ರಿಷ್ಣ ಮಠ ಉಡುಪಿ ಇದರ ವಿಶ್ವ ಗೀತಾ ಪರ್ಯಾಯ 2024-26 ಗೀತೋತ್ಸವ ಪ್ರಯುಕ್ತ ನಡೆಯುವ ಲಕ್ಷಕಂಠ ಗೀತಾ ಭಜನೋತ್ಸವ‌ಕ್ಕೆ ತಾಲೂಕಿನ ವಿವಿಧ ಭಜನಾ ಮಂಡಳಿಯ ಎರಡು ಸಾವಿರದ ಐನೂರಕ್ಕು ಅಧಿಕ ಭಜಕರು ಭಾಗವಹಿಸುತ್ತಿದ್ದು ಇದಕ್ಕೆ ಚಾಲನೆ ನೀಡಿ ಮಾತನಾಡಿ ಇಂದು ಅನೇಕ ಪುಟಾಣಿಗಳು ಭಜನೆಯಲ್ಲಿ ಭಾಗವಹಿಸಿದ್ದಾರೆ, ಭಗವಾನ್ ಶ್ರಿಕ್ರಿಷ್ಣನಿಗೂ ಸಂತೋಷವಾಗಬಹುದು. ಎಲ್ಲ ಭಜಕರಿಗೂ ಶ್ರಿಕ್ರಿಷ್ಣನ ಅನುಗ್ರಹ ಸಿಗುವಂತಾಗಲಿ. ಸಾವಿರಾರು ಭಜಕರನ್ನು ಶಿಸ್ತುಬದ್ಧವಾಗಿ ರೂಪಿಸಿದ ಎಲ್ಲಾ ಭಜನಾ ತರಬೇತಿದಾರರಿಗೆ ಅಬಿನಂದನೆಗಳು ಎಂದರು.

ಧರ್ಮಸ್ಥಳ ಅನ್ನಪೂರ್ಣ ಅನ್ನಛತ್ರದ ಮೇಲ್ವಿಚಾರಕ ಸುಬ್ರಹ್ಮಣ್ಯ ಪ್ರಸಾದ್ ಮಾತನಾಡಿ ನಾನು ಎಂಬ ಅಹಂ ದೂರವಾಗಲು ಭಜನೆ ಪ್ರೇರಣೆ. ದರ್ಮಸ್ಥಳ ಭಜನಾ ಕಮ್ಮಟದ ಮೂಲಕ ಭಜನೆಗೆ ಹೊಸ ರೂಪ ಬಂದಿದ್ದು ಇದಕ್ಕೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕಾರಣ. ಇಂದು ಗ್ರಾಮ ಗ್ರಾಮಗಳಲ್ಲಿ ಭಜನಾ ಮಂಡಳಿ ಮೂಲಕ ನಾಯಕತ್ವ ಬೆಳೆಸುವ ಕಾರ್ಯವಾಗುತ್ತಿದೆ ಎಂದರು.

ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಭಜನಾ ಪರಿಷತ್ ನ ರಾಜ್ಯಾದ್ಯಕ್ಷ ಚಂದ್ರಶೇಖರ ಸಾಲಿಯಾನ್, ತಾ. ಪಂ. ಮಾಜಿ ಸದಸ್ಯ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಏಣಿಂಜೆ, ಪತ್ರಕರ್ತ ಮನೋಹರ್ ಬಳಂಜ, ಭಜನಾ ಪರಿಷತ್ ಗುರುವಾಯನಕೆರೆ ವಲಯಾದ್ಯಕ್ಷ ಜಗದೀಶ್ ಮೈರ, ಜಯರಾಜ್ ನಡಕ್ಕರ, ಭಜನಾ ತರಬೇತುದಾರರಾದ ಸಂದೇಶ್ ಮದ್ದಡ್ಕ, ನಾಗೇಶ್, ತಾಲೂಕಿನ ವಿವದ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಶ್ರೀ ಕ್ಷೇತ್ರ ದರ್ಮಸ್ಥಳ ಗ್ರಾಮಾಬಿವ್ರುದ್ದಿ ಯೋಜನೆಯ ಯೋಜನಾದಿಕಾರಿ ಅಶೋಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here