ಕೊಯ್ಯೂರು: ಸ.ಹಿ.ಪ್ರಾ. ಶಾಲೆಯ ಅಮೃತ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಬೆಳ್ತಂಗಡಿ: ಕೊಯ್ಯೂರು 75 ನೇ ವರ್ಷದ ಅಮೃತ ಮಹೋತ್ಸವದ‌ “ಅಮೃತ ಕೊಯ್ಲು” ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ನ.28 ರಂದು ಶಾಲಾ ಸಭಾಂಗಣದಲ್ಲಿ ನೆರವೇರಿತು. ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ. ಪುಷ್ಪಗಿರಿ ಊರವರ ಸಹಕಾರದಿಂದ ಅಧ್ಬುತವಾಗಿ ಅಭಿವೃದ್ಧಿಗೊಂಡಿರುವ ಈ ಸರಕಾರಿ ಶಾಲೆಯೂ ಅದೆಷ್ಟೋ ಮುಚ್ಚುವ ಪರಿಸ್ಥಿತಿಯಲ್ಲಿರುವ ಸರಕಾರಿ ಶಾಲೆಗಳಿಗೆ ಪ್ರೇರಣೆಯಾಗಿದೆ ಎಂದರಲ್ಲದೇ, ಈ ಶಾಲೆಯ ಅಭಿವೃದ್ಧಿಯ ವಿಚಾರದಲ್ಲಿ “ಬದುಕು ಕಟ್ಟೋಣ ಬನ್ನಿ” ತಂಡದ ಸಂಚಾಲಕರು ಮತ್ತು ಲಕ್ಷ್ಮಿ ಗ್ರೂಪ್ ನ ಮಾಲಕ ಕೆ. ಮೋಹನ್ ಕುಮಾರ್ ಅವರ ಕೊಡುಗೆಯನ್ನು ಸ್ಮರಿಸಿ ಶ್ಲಾಘಿಸಿದರು. ಕಾರ್ಯಕ್ರಮಕ್ಕೆ ಶುಭ ಹಾರೈಸಿ, ಕಾರ್ಯಕ್ರಮದ ಯಶಸ್ಸಿಗೆ ತಮ್ಮಿಂದಾದಗುವ ಸಹಕಾರವನ್ನು ನೀಡುವ ಭರವಸೆಯಿತ್ತರು.

ಅಮೃತ ಮಹೋತ್ಸವದ‌ ಗೌರವಾಧ್ಯಕ್ಷ ಬಾಲಕೃಷ್ಣ ಪೂಜಾರಿ ಮಾತನಾಡಿ ರಂಗಮಂದಿರ ನಿರ್ಮಾಣದ ಈ ವರೆಗಿನ ಖರ್ಚು ವೆಚ್ಚಗಳ ಬಗ್ಗೆ ಮಾಹಿತಿ ನೀಡಿದರು. ಮುಂದುವರೆದು ಉಳಿದ 14 ದಿನಗಳನ್ನು ರಾತ್ರಿ ಹಗಲು ದುಡಿದಾಗ 28 ದಿನಗಳಷ್ಟು ಸಮಯ ಸಿಗುವುದರಿಂದ ಈ ನಿಟ್ಟಿನಲ್ಲಿ ನಾವೆಲ್ಲರೂ ರಾತ್ರಿ ಹಗಲು ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು. ಅಶೋಕ್ ಕುಮಾರ್ ಅಗ್ರಸಾಲೆ ಇವರು ಮುಂಬರುವ ಕಾರ್ಯಕ್ರಮಕ್ಕೆ ಶುಭ ಹಾರೈಕೆಯ ಮಾತುಗಳನ್ನಾಡಿದರು. ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಲೋಕೇಶ್.ಪಿ ಅಮೃತ ಮಹೋತ್ಸವ ಕಾರ್ಯಕ್ರಮದ ಮುಂದಿನ ಕಾರ್ಯಯೋಜನೆಗಳ
ಬಗ್ಗೆ ವಿವರಣೆಯಿತ್ತರು.

ಗೌರವಾಧ್ಯಕ್ಷ ಪ್ರಚಂಢಭಾನು ಭಟ್ ಪಾಂಬೇಲು, ಕಾರ್ಯಾಧ್ಯಕ್ಷ ಮಹಮ್ಮದ್ ಹಾರೂನ್ ಬಜಿಲ, ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷರಾದ ಕೇಶವ ಗೌಡ ಕಂಗಿತ್ತಿಲು, SDMC ಅಧ್ಯಕ್ಷ ವಿನಯ್ ಕೆ. ಕೋಡಿಯೇಲು, SDMC ಉಪಾಧ್ಯಕ್ಷೆ ಕಸ್ತೂರಿ ಕಳೆಂಜಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಸ.ಪ.ಪೂ.ಕಾಲೇಜಿನ ಪ್ರಾಂಶುಪಾಲ ಮೋಹನ್ ಗೌಡ ಭಂಡಾರಿಕೋಡಿ, ಸ.ಪ್ರೌಡ ಶಾಲೆಯ ಮುಖ್ಯೋಪಾಧ್ಯಾಯರಾದ ರಾಧಾಕೃಷ್ಣ ತಚ್ಚಮೆ, ಹಳೆ ವಿಧ್ಯಾರ್ಥಿ ಸಂಘದ ಪ್ರ ಕಾರ್ಯದರ್ಶಿ ಪಿ. ಚಂದ್ರಶೇಖರ ಸಾಲ್ಯಾನ್, ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಲೋಕೇಶ್ ಕೋರ್ಯಾರು, ಪ್ರಧಾನ ಸಂಚಾಲಕ ದಾಮೋದರ ಗೌಡ ಬೆರ್ಕೆ, ಶ್ರೀ ಕೃಷ್ಣ ಭಜನಾ ಮಂಡಳಿ ಅಧ್ಯಕ್ಷ ರೋಹಿತಾಶ್ವ ಉಮಿಯ ದರ್ಖಾಸು, ಡಾ.ದಿವಾ ಕೊಕ್ಕಡ, ಶಾಲಾ ಶಿಕ್ಷಕ ವೃಂದದವರು, SDMCಯ ಸದಸ್ಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಶಿಕ್ಷಕರಾದ ದೀಪಿಕಾ ಹಾಗೂ ವೀಣಾ ಅವರು ಪ್ರಾರ್ಥನೆ ಮಾಡಿದರು. ಶಾಲೆಯ ಶಿಕ್ಷಕ ರಮೇಶ್ ವಿ. ಸ್ವಾಗತಿಸಿ, ಶಿಕ್ಷಕಿ ವಾಣಿಶ್ರೀ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ದೇವಪ್ಪ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here