




ಕಲ್ಮಂಜ: ಸುಮಾರು 600 ವರ್ಷಕ್ಕಿಂತಲೂ ಮೇಲ್ಪಟ್ಟು ಇತಿಹಾಸ ಇರುವ ಪಾಲುಬಿದ್ದ ಸ್ಥಿತಿಯಲ್ಲಿದ್ದ ಅನೇಕ ಕುರುಹುಗಳನ್ನು ಹೊಂದಿದ್ದ ಅಲೆಕ್ಕಿ ಅಂತರಬೈಲು ಬದಿನಡೆ ಕ್ಷೇತ್ರದಲ್ಲಿ ದೈವಜ್ಞರಿಂದ ಪ್ರಶ್ನಾ ಚಿಂತನೆ ನಡೆಸಿ ಕಂಡು ಬಂದಂತೆ ಉಳ್ಳಾಯ ಉಳ್ಳಾಲ್ತಿ ಮತ್ತು ಮೂರ್ತಿಳ್ಳಯ ಮತ್ತು ನಾಗದೇವರು, ಬ್ರಹ್ಮದೇವರುಗಳ ಸಾನಿಧ್ಯ ಜೀರ್ಣೋದ್ದಾರ ನ.28ರಂದು ಶ್ರೀ ರಾಮ ಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜರವರ ಆಶೀರ್ವಾದಗಳೊಂದಿಗೆ, ಕ್ಷೇತ್ರದ ತಂತ್ರಿವರ್ಯರಾದ ಧರ್ಮಸ್ಥಳದ ವೇದಮೂರ್ತಿ ವಿಷ್ಣುಮೂರ್ತಿ ಹೆಬ್ಬಾರ್ ಮುಂಡ್ರುಪ್ಪಾಡಿ, ಕಲ್ಮಂಜ ಅಂತರ ಬೈಲು ಅನಂತೇಶ ಚಡಗ ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ರಕ್ಷಿತ್ ಶಿವರಾಮ್ ಅಧ್ಯಕ್ಷತೆಯಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.



ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಉಜಿರೆ ಕನಸಿನ ಮನೆ ಲಕ್ಷ್ಮೀ ಗ್ರೂಪ್ ಕೆ. ಮೋಹನ್ ಕುಮಾರ್, ಉಜಿರೆ ಸಂಧ್ಯಾ ಟ್ರೇಡರ್ಸ್ ರಾಜೇಶ್ ಪೈ ಸಂಧ್ಯಾ ಟ್ರೇಡರ್ಸ್, ಗುಂಡಿ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದ ಕಿರಣ್ ಕಾಡಿಲ್ಕರ್, ಬೆಂಗಳೂರು ಹರೀಶ್ ಚಾರ್ಟೆಡ್ ಅಕೌಂಟೆಂಟ್ ಹರೀಶ್, ಬೆಂಗಳೂರು ಉದ್ಯಮಿ ನಾಗಪ್ರದೀಪ್, ದೇಸಿ ಕೇಂದ್ರ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ನವೀನ್ ಪ್ರಕಾಶ್, ಪಜಿರಡ್ಕ ರಾಜೇಶ್ ಹೊಳ್ಳ ಮತ್ತು ಮನೆಯವರು ಪಜೀರಡ್ಕ, ಉಜಿರೆ ಉದ್ಯಮಿ ಶ್ರೀ ಮಹಾವೀರ ಗ್ರೂಪ್ ಪ್ರಭಾಕರ ಹೆಗ್ಡೆ, ಉಜಿರೆ ತ್ರಿಶೂಲ್ ಎಲೆಕ್ಟ್ರಾನಿಕ್ಸ್ ಮಾಲಕ ಸಮಾಜ ಸೇವಕ ಪ್ರಭಾಕರ್ ಸಿ.ಜಿ. ಕನ್ಯಾಡಿ, ಶೇಖರ ಗೌಡ ಗುಲ್ಲೋಡಿ, ಕೃಷ್ಣಪ್ಪ ಗುಡಿಗಾರ್ ಅಲೆಕ್ಕಿ, ರವೀಂದ್ರ ಪೂಜಾರಿ ಆರ್ಲ, ರಮೇಶ್ ಗೌಡ ಗುಲ್ಲೋಡಿ, ಕಲ್ಮಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲಾ ಗೌಡ, ಸಮಿತಿಯ ಅಧ್ಯಕ್ಷ ತುಕಾರಾಂ ಸಾಲ್ಯಾನ್ ಆರ್ಲ, ಕಾರ್ಯದರ್ಶಿ ಸುನೀಲ್ ಕನ್ಯಾಡಿ, ಕೋಶಾಧಿಕಾರಿ ಮಂಜುನಾಥ್ ಗುಡಿಗಾರ್, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಗೌಡ ಹುಂಕ್ರೋಟ್ಟು ಜೊತೆ ಕಾರ್ಯದರ್ಶಿ ಶ್ರೀನಿವಾಸ್ ಗೌಡ ಭದ್ರಕಾಡು, ವಿವಿಧ ಗಣ್ಯರು ಮತ್ತು ಊರವರು ಉಪಸ್ಥಿತರಿದ್ದರು.









