




ನೆಲ್ಯಾಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಪೀಠಾರೋಹಣ ಮಾರ್ ಜೇಮ್ಸ್ ಪಟ್ಟೆರಿಲ್ ಸಿ.ಎಂ.ಎಫ್ ಅವರಿಗೆ ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಧರ್ಮಾಧ್ಯಕ್ಷರಿಗೆ ನೆಲ್ಯಾಡಿ ಪೇಟೆ ಹಾಗೂ ಸಮೀಪದ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸನ್ಮಾನಿಸಿ, ಗೌರವ ಸೂಚಿಸಲಾಯಿತು. ವರ್ತಕ ಸಂಘ, ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ, ಕಟ್ಟಡ ಮಾಲಕರ ಸಂಘ, ರಿಕ್ಷಾ ಚಾಲಕ ಮಾಲಕ ಸಂಘ ಟಾಕ್ಸಿ ವಾಹನಗಳ ಸಂಘ ಹಾಗೂ ಇತರೆ ಸಾಮಾಜಿಕ ಮತ್ತು ಹಾಗೂ ರಾಜಕೀಯ ಮುಖಂಡರು ಭಾಗವಹಿಸಿ ಶುಭ ಹಾರೈಸಿದರು.


ಟೋಮಿ ಮಟ್ಟಮ್, ರಘು ಲಾಲ್, ಗಣೇಶ್ ರಶ್ಮಿ, ರಫೀಕ್ ಸೀಗಲ್, ಮುತಾಲಿಬ್ ಎಂ.ಆರ್., ದಿನೇಶ್ ಎಂ.ಟಿ., ಪ್ರಶಾಂತ್ ನೇಸರ, ರಿಚರ್ಡ್ ಫೆರ್ನಾಂಡಿಸ್, ಜೋಸೆಫ್ ಡಿ ಸೋಜಾ, ಸಂತೋಷ್ ಹೊಸಮಜಲು ಉಪಸ್ಥಿತರಿದ್ದರು.









