ಕನ್ನಡ ಸಾಹಿತ್ಯದ ಬೆಳವಣಿಗೆಗೆ ಕವಿಗೋಷ್ಠಿ ಅಗತ್ಯ: ಸುಮಂತ್ ಕುಮಾರ್ ಜೈನ್

0

ಗುರುವಾಯನಕೆರೆ: ಎಕ್ಸೆಲ್ ಪಿಯು ಕಾಲೇಜು, ವಿದ್ಯಾ ಸಾಗರ ಕ್ಯಾಂಪಸ್ ನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ಅಕ್ಷರೋತ್ಸವ- 2025. ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ-ಕವಿಘೋಷ್ಠಿ ಕಾರ್ಯಕ್ರಮದಲ್ಲಿ ಎಕ್ಸೆಲ್ ಪಿಯು ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರು “ಕನ್ನಡ ಸಾಹಿತ್ಯ ಬೆಳವಣಿಗೆಯಲ್ಲಿ ಕವಿಗೋಷ್ಠಿಯು ಅಗತ್ಯ” ಎಂದು ಕನ್ನಡ ತಮ್ಮ ಸಾಹಿತ್ಯ ಅಭಿಮಾನವನ್ನು ವ್ಯಕ್ತ ಪಡಿಸಿದರು.

ಅಧ್ಯಕ್ಷತೆಯನ್ನು ಶೋಭಾ ಹರಿಪ್ರಸಾದ್ ವಹಿಸಿದ್ದರು. ಅದ್ಭುತ ಮತ್ತು ಆಕರ್ಷಕ ವೇದಿಕೆಯ ಮೇಲೆ ಆಯೋಜನೆಗೊಂಡಿದ್ದ ಈ ಕವಿಗೋಷ್ಠಿಗೆ  ರಾಜ್ಯದ ನಾನಾ ಜಿಲ್ಲೆಗಳಿಂದ ಸುಮಾರು 41 ಕವಿಗಳು ತಮ್ಮ ಕವನವನ್ನು ವಾಚಿಸಿದರು. ಹಲವಾರು ಕವನಗಳನ್ನು ವಾಚನ, ಗಾಯನ, ನೃತ್ಯ, ಕುಂಚದ ಮೂಲಕ ಪ್ರದರ್ಶಿಸಲಾಯಿತು.

ಕವಿಗೋಷ್ಠಿಯಲ್ಲಿ ಪ್ರಾಸ್ತಾವಿಕ ನುಡಿಗಳ ಮೂಲಕ ಸರ್ವರನ್ನು ಸ್ವಾಗತಿಸಿದ ಕಾಲೇಜಿನ ಆಡಳಿತ ಮುಖ್ಯಸ್ಥ ಶಾಂತಿರಾಜ್ ಜೈನ್  ರವರು ಇಂದಿನ ದಿನಗಳಲ್ಲಿ ಮರೆಯಾಗುತ್ತಿರುವ ಕವನ ರಚನೆಯ ಮಹತ್ವದ ಮನವರಿಕೆ ಮಾಡಿಕೊಟ್ಟರು.

ಸಂಸ್ಕೃತ ಉಪನ್ಯಾಸಕ ರಘು ಬಿಜೋರ್ ಮತ್ತು ಅನುಶ್ರೀ ಅವರ ಮಾರ್ಗದರ್ಶನದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಅನೇಕ ಕವಿತೆಗಳನ್ನು ರಾಗ ಸಂಯೋಜನೆಯ ಮೂಲಕ ಹಾಡಿ ಮನರಂಜಿಸಿದರು. ವಿದ್ಯಾರ್ಥಿಗಳ ತಂಡಗಳು ಕವಿಗಳ ಕಾವ್ಯಗಳಿಗೆ ನೃತ್ಯ ಮಾಡುವ ಮೂಲಕ ಮತ್ತು ಕನ್ನಡ ಉಪನ್ಯಾಸಕ ಸಂಜೀವ್ ಅವರು ಕಾವ್ಯಗಳ ಭಾವಕ್ಕನುಸಾರವಾಗಿ ಚಿತ್ರಕಲೆಯನ್ನು ಬಿಡಿಸುವ ಮೂಲಕ ಕವಿಗೋಷ್ಠಿಯ ಮೆರುಗನ್ನು ಹೆಚ್ಚಿಸಿದರು. ಕವಯಿತ್ರಿ ಶುಭ ಹರಿಪ್ರಸಾದ್ ರವರ ಕಾವ್ಯಕ್ಕೆ ಯಕ್ಷಗಾನದ ಮೆರುಗನ್ನು ನೀಡಿದ ಉಪನ್ಯಾಸಕ ಈಶ್ವರ್ ಶರ್ಮ ಮತ್ತು ವೆಂಕಟೇಶರವರು ಕವಿಗೋಷ್ಠಿಯಲ್ಲಿ ಮತ್ತಷ್ಟು ಗಮನ ಸೆಳೆದರು.

ಪ್ರಾಚಾರ್ಯ ಡಾ. ನವೀನ್ ಕುಮಾರ್ ಮರಿಕೆ, ಡಾ. ಪ್ರಜ್ವಲ್,  ಉಪ ಪ್ರಾಚಾರ್ಯ ರೋಹಿತ್, ಆಡಳಿತ ಅಧಿಕಾರಿ ಕೀರ್ತಿನಿಧಿ, ಹಾಸ್ಟೆಲ್ ಮೇಲ್ವಿಚಾರಕ ಮಲ್ಲೇಶ್ ಜೈನ್, ಕನ್ನಡ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿಗಳು, ನಿಲಯ ಪಾಲಕರು ಮುಂತಾದವರೊಂದಿಗೆ ಬೋಧಕ, ಬೋಧಕೇತರ ಸಿಬ್ಬಂದಿ, ಪೋಷಕರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಉಪನ್ಯಾಸಕ ತಿಪ್ಪೇಸ್ವಾಮಿ ಮತ್ತು ಮುನಿರವರು ನಿರೂಪಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಜಯರಾಮರವರು ವಂದಿಸಿದರು.

LEAVE A REPLY

Please enter your comment!
Please enter your name here