




ಬೆಳಾಲು: ದೊಂಪದಪಲ್ಕೆ ಅಂಗನವಾಡಿಯಲ್ಲಿ ಇತ್ತೀಚೆಗೆ ಮಕ್ಕಳ ದಿನಾಚರಣೆಯನ್ನು ನಡೆಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಚಿರಾಂತ್ ವಹಿಸಿದ್ದರು. ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ, ಉಪಾಧ್ಯಕ್ಷೆ ಗೀತಾ, ಸದಸ್ಯ ಸುರೇಂದ್ರ ಗೌಡ ಎಸ್., ಪೆರಿಯಡ್ಕ ಸ. ಹಿ. ಪ್ರಾ. ಶಾಲಾ ಮುಖ್ಯ ಶಿಕ್ಷಕಿ ವಿಜಯ, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಪ್ರಭಾ, ಸ್ಥಳೀಯ ಗಣ್ಯರಾದ ಉದ್ಯಮಿ ಜಯಣ್ಣ ಗೌಡ ಮೀನಂದೇಲು, ಆಶಾ ಕಾರ್ಯಕರ್ತೆ ಡೀಕಮ್ಮ, ಗೋಡೆ ಬರಹ ಗಾರ ಗಣೇಶ್ ಎಂ., ಉಪಸ್ಥಿತರಿದ್ದರು.


ಅಘನ್ಯ ಅವರ ಹುಟ್ಟು ಹಬ್ಬ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು ತಾಯಂದಿರು ಹಾಜರಿದ್ದರು. ಮಕ್ಕಳಿಗೆ ಆಟೋಟ ಸ್ಪರ್ಧೆಗಳನ್ನು ನಡೆಸಿ ಬಹುಮಾನವನ್ನು ವಿತರಿಸಲಾಯಿತು. ಜಯಶ್ರೀ ಮಿನಂದೇಲು ಕಾರ್ಯಕ್ರಮ ನಿರೂಪಿಸಿ, ಸಹಾಯಕಿ ರಕ್ಷಿತಾ ಸಹಕರಿಸಿದರು. ಅಂಗನವಾಡಿ ಕಾರ್ಯಕರ್ತೆ ಲೋಕಮ್ಮ ವಂದಿಸಿದರು.






