




ಉಜಿರೆ: ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ರಾಜಗೋಪುರ ವಿಜಯ ಗೋಪುರದ ನಿರ್ಮಾಣ ಕಾರ್ಯವು ಬರದಿಂದ ಸಾಗುತ್ತಿದೆ. ಈ ಪುಣ್ಯ ಕಾರ್ಯಕ್ಕೆ ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದಿಂದ ದೇಣಿಗೆಯಾಗಿ ರೂ. 50,000/- ಗಳ ಚೆಕ್ಕನ್ನು ಸಂಘದ ಅಧ್ಯಕ್ಷ ವಲೇರಿಯನ್ ರೊಡ್ರಿಗಸ್ ಅವರು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಅವರಿಗೆ ಹಸ್ತಾಂತರಿಸಿದರು.



ಸಂಘದ ಉಪಾಧ್ಯಕ್ಷ ಅನಿಲ್ ಪ್ರಕಾಶ್ ಡಿಸೋಜ, ನಿರ್ದೇಶಕರಾದ ಸುನಿಲ್ ಸಂತೋಷ್ ಮೊರಾಸ್, ಅರುಣ್ ಸಂದೇಶ್ ಡಿಸೋಜ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಲ್ಸನ್ ನೆಲ್ಸನ್ ಮೋನಿಸ್, ಪ್ರಧಾನ ಕಚೇರಿ ಶಾಖೆಯ ವ್ಯವಸ್ಥಾಪಕ ಪ್ರವೀಣ್ ಪಿಂಟೊ, ಹಾಗೂ ಸಿಬ್ಬಂದಿ ವಿನೋಲ್ ಕ್ರಾಸ್ತಾ ಉಪಸ್ಥಿತರಿದ್ದರು.








