ಇಂದಬೆಟ್ಟು: ಉಳ್ಳಾಕುಳ ಮೂಲಸ್ಥಾನ ಶ್ರೀ ಕ್ಷೇತ್ರ ಕರುವಲ್ಲ ಕಲ್ಲಗುಂಡ ಶಿಲಾನ್ಯಾಸ

0

ಇಂದಬೆಟ್ಟು: ಶ್ರೀ ಅರ್ಧನಾರೀಶ್ವರ ದೇವಸ್ಥಾನ, ದೇವನಾರಿ ಇಂದಬೆಟ್ಟು ಉಳ್ಳಾಕುಳ ಮೂಲಸ್ಥಾನ ಶ್ರೀ ಕ್ಷೇತ್ರ ಕರುವಲ್ಲ ಕಲ್ಲಗುಂಡದಲ್ಲಿ ಉಳ್ಳಾಯ- ಉಳ್ಳಾಲ್ತಿ ಭೈರವ -ಮೂರ್ತಿಲ್ಲಾಯಾ, ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳ ನೂತನ ಭವ್ಯ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನ.26ರಂದು ಕರುವಲ್ಲ ಕಲ್ಲಗುಂಡ ಕ್ಷೇತ್ರದಲ್ಲಿ ನಡೆಯಿತು.

ನೀಲೇಶ್ವರ ಆಲಂಬಾಡಿ ಶ್ರೀ ವೇ। ಮೂ। ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ, ದೈವಜ್ಞ ನೆಲ್ಯಾಡಿ ಶ್ರೀಧರ ಗೋರೆಯರವರ ಪಶ್ನಾ ಚಿಂತನೆಯಂತೆ, ಖ್ಯಾತ ವಾಸ್ತು ಶಿಲ್ಪಿಗಳಾದ ಪ್ರಸಾದ್ ಭಟ್ ಮುನಿಯಂಗಳ ಅವರ ವಾಸ್ತು ವಿನ್ಯಾಸದಲ್ಲಿ, ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತಸರ ಶರತ್ ಕೃಷ್ಣ ಪಡೆವೆಟ್ನಾಯರ ಉಪಸ್ಥಿತಿಯಲ್ಲಿ, ಡಾ. ಪ್ರದೀಪ್ ಎ. ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಕರವಲ್ಲ ಕಲ್ಲಗುಂಡ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಅಜಿತ್ ಕುಮಾರ್ ಚೈನ್ ಇಂದಬೆಟ್ಟು ಗುತ್ತು ಅವರು ವಹಿಸಿಕೊಂಡಿದ್ದರು. ದಿಕ್ಕೂಚಿ ಭಾಷಣವನ್ನು ಕಾರ್ಕಳ ಧಾರ್ಮಿಕ ಚಿಂತಕ ಶ್ರೀಕಾಂತ್‌ ಶೆಟ್ಟಿ ನೆರವೇರಿಸಿದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಉಜಿರೆ ಎಸ್.ಡಿ.ಎಮ್. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಎಂ.ಡಿ. ಜನಾರ್ಧನ, ಶ್ರೀ ಕ್ಷೇತ್ರ ಕರುವಲ್ಲ ಕಲ್ಲಗುಂಡ ಜೀವದಾರ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಬೆಂಗಳೂರು ಉದ್ಯಮಿ ದೇವೇಂದ್ರ ಕೊಕ್ರಾಡಿ, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಹಿರಿಯ ಪ್ರಬಂಧಕ ಎಸ್. ಎನ್. ಬೊಳಿಯಂಜಿ, ಇಂದಬೆಟ್ಟು ಶ್ರೀ ಅರ್ಧನಾರೀಶ್ವರ ದೇವಸ್ಥಾನ ದೇವನಾರಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್. ಲಕ್ಷ್ಮಣ ಗೌಡ, ಬಂಗಾಡಿ ಕುತ್ರಬೆಟ್ಟು, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಕುಂದ ಸುವರ್ಣ, ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದಾಸಪ್ಪಗೌಡ ಕಾಂಜಾನು, ಇಂದಬೆಟ್ಟು ಅರ್ಧನಾರೀಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ. ಮೂ. ಆನಂದ ಭಟ್, ಬಂಗಾಡಿ ಕುತ್ರಬೆಟ್ಟು ಹಾಡಿ ದೈವ ಕ್ಷೇತ್ರ ಅಸ್ರಣ್ಣ ವೇ. ಮೂ. ಗೋಪಾಲಕೃಷ್ಣ ಉಪಾಧ್ಯಾಯ, ಮಾಣಿ ಉಳ್ಳಾಕುಳ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಉಂಬೆಜೆ, ಬೈಲುವಾರು ಸಮಿತಿ ಪ್ರಧಾನ ಸಂಚಾಲಕ ಶ್ರೀಕಾಂತ್ ಸೋಮಯದಡ್ಡು, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಸಂತೋಷ್ ಎಂ.ಬೆದ್ರಬೆಟ್ಟು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಮನೋಹರ್ ಪ್ರಸಾದ್ ಇಂದಬೆಟ್ಟು ಮತ್ತು ವಿನೋದ್ ಪ್ರಸಾದ್ ಕಲ್ಲಾಜೆ ನೆರವೇರಿಸಿದರು.

LEAVE A REPLY

Please enter your comment!
Please enter your name here