




ಬಳಂಜ: ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬಳಂಜ ಗ್ರಾಮ ಸಮಿತಿಯ ರಚನೆ ಸಮಾಲೋಚನಾ ಸಭೆ ನಡೆಯಿತು. ಪಕ್ಷ ಸಂಘಟನೆ, ಡಿ. 3ರಂದು ಮಂಗಳೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ವಿಶ್ವವಿದ್ಯಾಲಯಕ್ಕೆ ಭೇಟಿ ಸಂದರ್ಭದಲ್ಲಿ ಮಂಗಳೂರು ಅದಷ್ಟು ಜನ ಹೋಗುವ ಬಗ್ಗೆ ಚರ್ಚೆ ನಡೆಯಿತು.


ಬಳಂಜ, ನಾಲ್ಕೂರು, ತೆಂಕಕಾರಂದೂರು ಗ್ರಾಮಗಳ ಕಾರ್ಯಾಧ್ಯಕ್ಷ ಜೆರಾಮ್ ಲೋಬೊ ನೇತೃತ್ವದಲ್ಲಿ ಬಳಂಜ ಗ್ರಾಮ ಸಮಿತಿಯ ಗೌರವಾಧ್ಯಕ್ಷ ಡೀಕಯ್ಯ ಕುಲಾಲ್, ಬಳಂಜ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡೀಕಯ್ಯ ಕುಲಾಲ್, ಅಳದಂಗಡಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ದಿನೇಶ್ ಪಿ.ಕೆ., ದೇಜಪ್ಪ ಪೂಜಾರಿ, ಬಳಂಜ ಪಂಚಾಯತ್ ಸದಸ್ಯ ರವೀಂದ್ರ ಬಿ.ಅಮೀನ್, ಬಳಂಜ ಕಾಂಗ್ರೆಸ್ ಗ್ರಾಮ ಸಮಿತಿಯ ಉಪಾಧ್ಯಕ್ಷ ವಾಸು ಕಾವೋಡಿ, ಕಾರ್ಯದರ್ಶಿ ಸುಂದರ ಹೆಗ್ಡೆ, ಕೋಶಾಧಿಕಾರಿ ಪುರಂದರ ಪೂಜಾರಿ ಪೇರಾಜೆ, ಜೊತೆ ಕಾರ್ಯದರ್ಶಿ ಪ್ರವೀಣ್ ದೇವಾಡಿಗ, ಮುಖಂಡರಾದ ಮ್ಯಾಕ್ಸಿಮ್ ಕ್ರಾಸ್ತ, ರಂಜಿತ್ ಕುಮಾರ್, ಶೇಖರ್ ಗಾಂಧಿ ನಗರ, ಯುವರಾಜ್, ಉಸ್ಮಾನ್ ಬಳಂಜ, ರಾಮಣ್ಣ ಕನಡ ತೋಟದಪಲ್ಕೇ, ಇತರರು ಉಪಸ್ಥಿತರಿದ್ದರು. ಗ್ರಾಮ ಸಮಿತಿಯ ಅಧ್ಯಕ್ಷ ಡೀಕಯ್ಯ ಕುಲಾಲ್ ಸ್ವಾಗತಿಸಿ, ಕಾರ್ಯದರ್ಶಿ ಸುಂದರ ಹೆಗ್ಡೆ ವಂದಿಸಿದರು.








